ಬೆಳಗಾವಿ ಅ.20: ಬೆಳಗಾವಿ ಜಿಲ್ಲೆಯ ರಾಮದುರ್ಗ್ ತಾಲೂಕಿನ ಚಂದರಗಿ ಸ್ಪೋಕೋ ಸಂಸ್ಥೆಯ ಎಸ್ ಪಿ ಡಿ ಸಿ ಎಲ್ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಲಾ ಮಹಾವಿದ್ಯಾಲಯದಲ್ಲಿ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತವಾಗಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು.
ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ಧರ್ಮಗಳ ಭಾರತೀಯರ ನಡುವೆ ರಾಷ್ಟ್ರೀಯ ಏಕತೆ ಶಾಂತಿ ಸಹಾನುಭೂತಿ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸರ್ವಜ್ಞರು ಹೇಳುವಂತೆ ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಜಾತಿ ವಿಜಾತಿ ಎನಬೇಡ ದೇವನೊಲಿದಾತನೇ ಜಾತ ಎಂದು ತಿಳಿಸಿದ್ದಾರೆ ಮತ್ತೆ ಮುಂದುವರೆದು ನಡೆಯುವುದು ಒಂದೇ ಭೂಮಿ ಕುಡಿಯೋದೊಂದೇ ನೀರು ಸುಡುವಾಗ್ನಿ ಒಂದೇ ಇರುತ್ತಿರಲು ಕುಲ ಗೋತ್ರ ನಡುವೆ ಎತ್ತಣದು ಇದು ಮಾರ್ಮಿಕವಾಗಿ ತಿಳಿಸಿದ್ದಾರೆ ಮೇಲ್ಜಾತಿ ಕೆಳಜಾತಿ ಅಂತ ನೋಡದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಇಟ್ಟುಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಸತೀಶ್ ಪಾಟೀಲ್ ಅವರು ಮಾತನಾಡಿ ಜಾತಿ ಧರ್ಮ ಪ್ರದೇಶ ಮತ ಹಾಗೂ ಭಾಷೆಯ ಬೇದಭಾವವಿಲ್ಲದೆ ಭಾರತದ ಎಲ್ಲಾ ಜನತೆಯ ಭಾವೈಕ್ಯದಿಂದ ಬದುಕಬೇಕೆಂದು ಕರೆ ನೀಡಿದರು ಶ್ರೀ ಎಸ್ ಸಿ ತೋರಣಗಟ್ಟಿ ಅವರು ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯನ್ನ ಬೋಧಿಸಿದರು ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎನ್ ಐ ನಾಯ್ಕರ,ಎಮ್ ಕೆ ಕಾಡನ್ನವರ, ಸಚಿನ್ ಸೊಂಡೂರ್, ವೆಂಕಟೇಶ್ ಕಡಪಟ್ಟಿ, ವೀರೇಶ್ ಹಿಪ್ಪಲಿ, ಬೈರು ಜಿರಗೆ, ದಾನಪ್ಪ ಕಡಕೋಳ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು