ರಾಜ್ಯದಲ್ಲೆಡೆ ರಣ ಬಿಸಿಲಿಗೆ ತತ್ತರಿಸುತ್ತಿರುವ ಜನತೆ ವಿಪರೀತ ಬಿಸಿಲಿಗೆ ಹೊರಬರಲು ಸಾಧ್ಯವಾಗದೆ ಜನ ವದ್ದಾಡುತ್ತಿದ್ದು, ಇನ್ನೂ ಪುಟ್ಟ ಕಂದಮ್ಮಗಳ ಗತಿ ಏನು..? ವಿಪರೀತ ಬಿಸಿಲಿಗೆ ಈಗಾಗಲೇ ಕಲ್ಯಾಣ್ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳ ಸಮಯ ಬೆಳಿಗ್ಗೆ 8 ರಿಂದ 12 ಗಂಟೆ ವರೆಗೆ ನಿಗದಿಪಿಸಲಾಗಿತ್ತು, ಅದೇ ರೀತಿ ರಾಜ್ಯದಲ್ಲಿ ಬಿಸಿಲಿನ್ ತಾಪ್ ಹೆಚ್ಚಾಗಿದರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲು ಮನವಿ ಮಾಡಿದ ಹಿನ್ನೆಲೆ, ಏಪ್ರಿಲ್ 15 ರಿಂದ ಮೇ 10 ರವರೆಗೆ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬೆಳಿಗ್ಗೆ 8 ರಿಂದ 12 ಗಂಟೆ ವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಬೆಳಿಗ್ಗೆ 8 ರಿಂದ 12 ಗಂಟೆ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಈದಿಗ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬೆಳಿಗ್ಗೆ 8 ರಿಂದ 12 ರವರಿಗೆ ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಆದೇಶವು ಏಪ್ರಿಲ್ 15 ರಿಂದ ಮೇ 10ರ ವರೆಗೆ ವಿಸ್ತರಿಸಲಾಗಿದ್ದು ಅಂಗನವಾಡಿ ಸಿಬ್ಬಂದಿಗಳಿಗೆ ಮೇ 11 ರಿಂದ 26ರ ವರೆಗೆ ಬೇಸಿಗೆ ರಜೆ ನೀಡಲಾಗಿದೆ ಮೇ 27 ರಿಂದ ಅಂಗನವಾಡಿ ಕೇಂದ್ರಗಳು ಎಂದಿನಂತೆ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಾಯಂಕಾಲ 4:00 ವರೆಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.