Big Breaking: ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿ ಒಂದೇ ಕುಟುಂಬದ ಐವರು ಸಾವು, ಮುಗಿಲು ಮುಟ್ಟಿದ ಆಕ್ರಂದನ ಭೀಕರ ದುರಂತಕ್ಕೆ ಬಲಿಯಾದವರೆಲ್ಲಾ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದವರು.
ಬಾಗಲಕೋಟೆ: ಹೌದೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ನಾಳ್ ಕ್ರಾಸ ಬಳಿ ಮಣ್ಣು ಸಾಗಿಸುತ್ತಿದ ಟಿಪ್ಪರ ವಾಹನದ ಟೈಯರ ಬ್ಲಾಸ್ಟ್ ಆಗಿ ರಸ್ತೆ ಬದಿ ಪಾದಚಾರಿಗಳ ಮೇಲೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿ 5 ಜನ ಸಾವನಪ್ಪಿದ್ದಾರೆ. ಮೃತ ದುರ್ದೈವಿಗಳು ಸಂಜೆ ಹೊಲದ ಕೆಲಸವನ್ನು ಮುಗಿಸಿಕೊಂಡು ರಸ್ತೆ ಪಕ್ಕ ನಿಂತಿದ್ದರು. ಗರಸು ತುಂಬಿದ ಟಿಪ್ಪರ ವಾಹನದ ಟೈಯರ ಬ್ಲಾಸ್ಟ್ ಆದ ಪರಿಣಾಮ ರಸ್ತೆ ಬದಿ ನಿಂತಿದ್ದವರ ಮೇಲೆ ಉರುಳಿದೆ. ಮೃತ ದುರ್ದೈವಿಗಳೆಲ್ಲ ಒಂದೇ ಕುಟುಂಬದವರು.
5 ಜನ ಮೃತ ದುರ್ದೈವಿಗಳು
ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಯಲ್ಲವ್ವ ಯಂಕಪ್ಪ ತೋಳಮಟ್ಟಿ (60), ಪುಂಡಲೀಕ ಯಂಕಪ್ಪ ತೋಳಮಟ್ಟಿ (35), ನಾಗವ್ವ ಅಶೋಕ್ ಬಮ್ಮನವರ, ಯಂಕಪ್ಪ ಅವರ ಮಗಳು (45), ಅಶೋಕ ನಿಂಗಪ್ಪ ಬಮ್ಮಣ್ಣವರ ಯಂಕಪ್ಪ್ ಅವರ ಅಳಿಯ(50). ಮೃತ ದುರ್ದೈವಿಗಳು.
ಬೀಳಗಿ ತಾಲೂಕಿನ ಹೊನ್ಯಾಳ್ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿಷಯ ತಿಳಿದ ಬಿಳಗಿ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪ್ರಕರಣದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.