ಭಕ್ತರ ಇಷ್ಟಾರ್ಥಗಳ ಈಡೇರಿಸುವ ಹಾಗೂ ದೋಷ ಪರಿಹಾರಕ್ಕಾಗಿ ಶ್ರೀ ಮಠದಲ್ಲಿ ವಿಶೇಷ ಅಗ್ನಿ ಪೂಜೆಯನ್ನು ಹಮ್ಮಿಕೊಂಡಿರುವ ಡಾ! ಪವಾಡೇಶ್ವರ ಮಹಾಸ್ವಾಮೀಜಿ.

ಗೋಕಾಕ್ ತಾಲೂಕಿನ ಸುಕ್ಷೇತ್ರ ಕೊಣ್ಣೂರ ಮರಡಿಮಠದ ಹೆಸರಾಂತ ಶ್ರೀಮದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಶ್ರಾವಣ ತಿಂಗಳ ಮೊದಲ ಸೋಮವಾರದಂದು ಭಕ್ತರ ಇಷ್ಟಾರ್ಥಗಳ ಸಿದ್ಧಿ ಹಾಗೂ ದೋಷಗಳ ಪರಿಹಾರಕ್ಕೆ ಶ್ರೀಮಠದಿಂದ ವಿಶೇಷ ಅಗ್ನಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು ಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರು ಶ್ರೀಮಠದಲ್ಲಿ ಹೆಸರನ್ನು ನೋಂದಾಯಿಸಿರಬೇಕು.

ಬೆಳಗಾವಿ ಅ.4: ಶ್ರೀಮದ್ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಸಾವಿರಾರು ವರ್ಷಗಳ ಹಿಂದೆ ಶ್ರೀ ಕಾಡಸಿದ್ದೇಶ್ವರರಿಂದಲೇ ಆರಂಭಗೊಂಡ ಅಗ್ನಿ ಇಂದಿಗೂ ಶ್ರೀ ಮಟ್ಟದಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಗ್ನಿ ಉರಿಯುತತ್ತಲೇ ಇದೆ. ಅಗ್ನಿ ಪೂಜೆ ಮಾಡಿ ಭಕ್ತರು ಸಂಕಲ್ಪಿಸಿರುವ ಕಾರ್ಯಗಳು ಯಶಸ್ವಿಯಾಗಿದೆ. 

ಶಸ್ತೋತ್ರವಾಗಿ ಅಗ್ನಿ ಪೂಜೆಯನ್ನು ಇದೇ ಸೋಮವಾರ ದಿನಾಂಕ. 05-08- 2024 ರಂದು ಮುಂಜಾನೆ 10 ಗಂಟೆಗೆ ಲಿಂಗೈಕ ಶ್ರೀ ಮ, ಘ,ಚ ಡಾ! ಅದೃಶ್ಯ ಗುರುಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ ಪೂಜ್ಯ ಶ್ರೀ, ಮ, ಘ,ಚ ಡಾ! ಪವಾಡೇಶ್ವರ  ಮಹಾಸ್ವಾಮಿಗಳ ಇವರ ದಿವ್ಯ ಸಾನಿಧ್ಯದಲ್ಲಿ,  ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ, ಬ್ರ, ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಹುಕ್ಕೇರಿ ಹಿರೇಮಠದ ಗುರುಕುಲದಲ್ಲಿ ವೇದ ಅಧ್ಯಯನ ಗೈದ 51 ಪುರೋಹಿತರ ವೈದಿಕತ್ವದಲ್ಲಿ ಅಗ್ನಿ ಪೂಜೆ ಆರಂಭಗೊಳ್ಳಲಿದೆ ಕಾರಣ ಪೂಜೆಯಲ್ಲಿ ಪಾಲ್ಗೊಳ್ಳುವ ಸದ್ಭಕ್ತರು ಶ್ರೀಮಠದಲ್ಲಿ ಹೆಸರನ್ನು ನೋಂದಾಯಿಸಬೇಕು.  ಭಕ್ತರು 501 ರೂಪಾಯಿ ಪಾವತಿ ಪಡೆದ ಭಕ್ತರಿಗೆ 108 ಗಿಡಮೂಲಿಕೆಗಳು ನವಗ್ರಹ ಕಟ್ಟಿಗೆಗಳು, ಕೊಬ್ಬರೆ , ತುಪ್ಪ, ಮತ್ತು ಆಶೀರ್ವಾದ ಕಾಯಿ ಎಲ್ಲವನ್ನು ಕೂಡ ನೀಡಲಾಗುವುದು ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ವಿಶೇಷ ಸೂಚನೆ:

ಭಕ್ತರ ಏಳಿಗೆಗಾಗಿ ಭಕ್ತರ, ಇಷ್ಟಾರ್ಥಗಳ ಸಿದ್ದಿಗಾಗಿ, ಭಕ್ತರು ಅಂದುಕೊಂಡ ಕಾರ್ಯಗಳ ಯಶಸ್ವಿಯಾಗಲೆಂದು ಹಾಗೂ ಭಕ್ತರ ಯಾವುದಾದರೂ ದೋಷಗಳಿದ್ದರೆ ಪರಿಹಾರ ಕಂಡುಕೊಳ್ಳಲು ಶ್ರೀಮಠದ ಶ್ರೀಗಳಾದ ಡಾ! ಪವಾಡೇಶ್ವರ ಮಹಾಸ್ವಾಮಿಜಿಯವರು ಭಕ್ತರ ಸಂಕಲ್ಪಕಾಗಿ ಈ ಅಗ್ನಿ ಪೂಜೆಯ ಮಹಾಯಾಗವನ್ನು ಹಮ್ಮಿಕೊಂಡಿದ್ದಾರೆ.