ಬೆಳ್ಳಂಬೆಳಿಗ್ಗೆ ಜವರಾಯಣ ಅಟ್ಟಹಾಸ; ಚಿಂಚಲಿ ಮಾಯಕ್ಕ ದರ್ಶನ  ಮುಗಿಸಿ ವಾಪಸಾಗುತ್ತಿದ್ದ ವಾಹನ ಭೀಕರ ಅಪಘಾತದಲ್ಲಿ 13 ಜನರ ದುರ್ಮರಣ.

ಅಪಘಾತದಲ್ಲಿ ನುಜ್ಜು ಗುಜ್ಜಾದ್ ಟಿಟಿ ವಾಹನ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಳ್ಳಂಬೆಳಿಗ್ಗೆ ಟಿಟಿ (Tempo traveller) ವಾಹನ ವೇಗವಾಗಿ ಬಂದು ನೀತಿದ್ದ ಲಾರಿಗೆ ಗುದ್ದಿದ ಪರಿಣಾಮ  ಸ್ಥಳದಲ್ಲೆ 13 ಜನರ ದುರ್ಮರಣ. ಮೃತರೆಲ್ಲರು ಬೆಳಗಾವಿ ಜಿಲ್ಲೆಯ ಚಿಂಚಲಿ ಮಾಯಮ್ಮ ಹಾಗೂ ಸವದತ್ತಿಯ ಎಲ್ಲಮ್ಮ ದೇವಸ್ಥಾನದ ದರ್ಶನವನ್ನು ಮುಗಿಸಿಕೊಂಡು ಮರಳಿ ಶಿವಮೊಗ್ಗದ ಭದ್ರಾವತಿ ಕಡೆಗೆ ತೆರಳುವಾಗ ಚಾಲಕನ  ಅಜಾಗ್ರತೆಯಿಂದ ಹಾಗೂ ನಿದ್ದೆಯ ಮಂಪರಿನಲ್ಲಿ ಈ ಭೀಕರ ಘಟನೆ ನಡೆದಿರುತ್ತದೆ.  ಇನ್ನು ಸ್ಥಳಕ್ಕೆ ಹಾವೇರಿ ಜಿಲ್ಲಾ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಮೃತರ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಹಾವೇರಿ( ಜೂ. 28) : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 16 ಜನರ ಕುಟುಂಬವನ್ನು ಬೆಳಗಾವಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಾದ ಚಿಂಚಲಿ ಮಾಯಮ್ಮ ಹಾಗೂ ಸೌದತ್ತಿ ಎಲ್ಲಮ್ಮ ದೇವರ ದರ್ಶನವನ್ನು ಮುಗಿಸಿಕೊಂಡು ವಾಪಸ್ ಆಗುವಾಗ ನಡೆದಿರುವಂತಹ ಭೀಕರ ಘಟನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 13 ಜನರ ದುರ್ಮರಣ ಗೊಂಡಿದ್ದಾರೆ. ಮೃತರ ಪೈಕಿ ಏಳು ಜನ ಮಹಿಳೆಯರು ಸೇರಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ ಇನ್ನು ಓರ್ವ ಬಾಲಕ ಮತ್ತು ಓರ್ವ ಅಜ್ಜಿಗೆ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಇನ್ನು ಭೀಕರ ಅಪಘಾತ ಬೆಳಿಗ್ಗೆ ಸುಮಾರು 3. 30 ರ ಸಮಯದಲ್ಲಿ ನಡೆದಿದ್ದು ಚಾಲಕನ ಅಜಾಗರೂಕತೆ ಹಾಗೂ ನಿದ್ದೆಯ ಮಂಪರುದಿಂದಾಗಿ ನಡೆದಿದೆ ಎನ್ನಲಾಗಿದೆ. ಇನ್ನೂ ಈ ಭೀಕರ ಅಪಘಾತದಲ್ಲಿ ಮೃತರ ಹೆಸರನ್ನು ಗುರುತಿಸಿದ್ದು ಮಾನಸ, ರೂಪ,ಮಂಜುಳಾ, ಪರಶುರಾಮ್, ಭಾಗ್ಯ ನಾಗೇಶ್, ವಿಶಾಲಾಕ್ಷಿ ,ಅರ್ಪಿತ, ಸುಭದ್ರಬಾಯಿ, ಪುಣ್ಯ, ಇವರೆಲ್ಲ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.