ಬೆಳಗಾವಿ: ಇಡೀ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದ ನಿಮಿತ್ಯ ಬೆಳಗಾವಿಯಲ್ಲಿ ಬೀಡು ಬಿಟ್ಟಿದೆ ಆದರೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರನಟ್ಟಿ ಎಂಬ ಗ್ರಾಮದ ವೀರಯೋಧ ಜಮ್ಮು ಕಾಶ್ಮೀರ ಲೇಹ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದರೂ ಕೂಡ ಅಂತ್ಯಕ್ರಿಯೆಗೆ ಬಾರದ ರಾಜಕಾರಣಿಗಳು. ಹೌದು ಯೋಧರು ನಮ್ಮ ದೇಶ ಕಾಯುತ್ತಾರೆ ಅಂತಹ ವೀರ ಯೋಧರ ಸಾವಿಗೂ ಬೆಲೆ ಕೊಡದೆ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು.
ಜಮ್ಮು ಕಾಶ್ಮೀರದಲ್ಲಿ ನಡೆದ ದುರಂತದಲ್ಲಿ ಬೆಳಗಾವಿ ಮೂಲದ ಮಹೇಶ್(24) ಎಂಬ ವೀರಯೋಧ ಸಾವನ್ನಪ್ಪಿದ್ದು ನಿನ್ನೆ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಯೋಧನ ಪಾರ್ಥಿವ ಶರೀರ ತರಲಾಯಿತು, ಪಾರ್ಥಿವ ಶರೀರವನ್ನು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹಾಗೂ ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರು ಗೌರವ ನಮನ ಸಲ್ಲಿಸಿ ಸ್ವೀಕರಿಸಿದರು.
ಜಮ್ಮು ಕಾಶ್ಮೀರದ ಲೇಹಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮಹೇಶ ಮೇಲೆ ರಸ್ತೆಯಲ್ಲಿ ಬಿದ್ದಂತ ಹಿಮವನ್ನು ಹಿಟಾಚಿ ಮೂಲಕ ತೆಗೆಯುವಾಗ ಪಕ್ಕದಲ್ಲಿದ್ದ ಗುಡ್ಡದ ಮೇಲಿನ ಬಂಡೆಗಳು ಉರುಳಿ ಯೋಧನ ಮೇಲೆ ಬಿದ್ದಿರುವುದರಿಂದ ಯೋಧನ ದೇಹ ಛಿದ್ರ ಛಿದ್ರವಾಗಿದೆ. ಇಂತಹ ಭೀಕರ ದುರಂತದಲ್ಲಿ ಕಾಲುಗಳು ಮಾತ್ರ ಸಿಕ್ಕಿವೆ.
ಯೋಧ ಮಹೇಶ ಅವರ ಸ್ವಗ್ರಾಮದಲ್ಲಿನ ಅಂತಿಮ ಕ್ಷಣದ ವಿಡಿಯೋ 👇
ಇನ್ನು ಮರಣ ಹೊಂದಿದ ವೀರಯೋಧನ ಮದುವೆಯು 2025ರ ಫೆಬ್ರುವರಿ ತಿಂಗಳಲ್ಲಿ ನಿಶ್ಚಯವಾಗಿತ್ತು ಆದರೆ ವಿಧಿಯಾಟವೇ ಬೇರೆ ಇತ್ತು ಕೇವಲ 25 ವರ್ಷಕ್ಕೆ ವೀರಮರಣ ಹೊಂದಿದ ವೀರ ಯೋಧನ ಗ್ರಾಮ ಶೋಕದಲ್ಲಿತ್ತು. ಇಡೀ ಗ್ರಾಮಕ್ಕೆ ಗ್ರಾಮವೇ ಕಣ್ಣೀರು ಹಾಕುತ್ತಿತ್ತು ಕುಟುಂಬದವರ ರೋಧನೆ ಮುಗಿಲು ಮುಟ್ಟಿತ್ತು. ಸ್ವಗ್ರಾಮ ಗೋಕಾಕ್ ತಾಲೂಕಿನ ಈರನಟ್ಟಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು