ಇತ್ತಿಚೆಗೆ ಕೆಎಸ್ಆರ್ಟಿಸಿ ನಿರ್ವಾಹಕರ ಮೇಲೆ ಹಲ್ಲೆಗಳು ಆಗುತ್ತಿರುವುದು ಸಹಜವಾಗಿದೆ ಇಂದು ಅಂತಹದೇ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಮಹಿಳಾ ನಿರ್ವಾಹಕಿ( ಕಂಡಕ್ಟರ್) ಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಕಪಾಳಮೋಕ್ಷ ಮಾಡಿದ ಯುವಕ.
ಬೆಳಗಾವಿ: ಸಾರಿಗೆ ಬಸ್ ನಲ್ಲಿ ಪ್ರಯಾಣ ಬೆಳೆಸಿದ ಯುವಕ ಚಿಲ್ಲರೆ ಹಣಕ್ಕಾಗಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಬೆಳಗಾವಿ ಹೊನಗಾ ನಗರ ಸಾರಿಗೆ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಂಡಕ್ಟರ್ ಜೊತೆಗೆ ಬಸ್ ನಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಯುವಕ ಗಲಾಟೆ ನಡೆಸಿದ್ದಾನೆ.
ಯುವಕ ಯಮನಾಪೂರ ಗ್ರಾಮದಿಂದ ಬಸನಲ್ಲಿ ಸಂಚರಿಸುತ್ತಿದ್ದ ಎನ್ನಲಾಗಿದೆ. ಯುವಕ ಅವಾಚ್ಯ ಶಬ್ದಗಳಿಂದ ಬಸ್ ನಲ್ಲಿ ನಿಂದಿಸುವಾಗ ಯಾರಿಗೆ ಬೈಯುತ್ತಿರುವೆ ಎಂದು ಕೇಳಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾನೆ.
ಶೋಭಾ ಗಾಣಗಿ ಹಲ್ಲೆಗೊಳಗಾದ ಮಹಿಳಾ ಕಂಡಕ್ಟರ್ ಗೆ ಯುವಕ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.
ಯುವಕನ ಹಲ್ಲೆಯಿಂದ ಮನನೊಂದು ನಡು ರಸ್ತೆಯಲ್ಲಿ ಕಣ್ಣಿರು ಹಾಕಿದ ಲೇಡಿ ಕಂಡಕ್ಟರ್. ನಂತರ ಸ್ಥಳೀಯ ಪೋಲಿಸರಿಗೆ ಯುವಕನನ್ನ ಒಪ್ಪಿಸಿದ ಬಸ್ಸಿನಲ್ಲಿದ್ದ ಪ್ರಯಾಣಿಕರು. ಎಪಿಎಂಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.