ಇತ್ತೀಚಿಗೆ ಜನರು ಸಂಬಂಧಕ್ಕಿಂತ ಹಣಕ್ಕಾಗಿ ಹೆಚ್ಚು ಬೆಲೆ ಕೊಡುವಂತಾಗಿದೆ, ಹಣಕ್ಕಾಗಿ ಎಂತಹ ಕಠೋರ ನಿರ್ಧಾರಕಾದರು ಇಳಿಯುತ್ತಾರೆ ಹಾಗೆ ಹಣ ದ್ವಿಗುಣ ಮಾಡಲು ಹಲವಾರು ಅಡ್ಡ ದಾರಿ ಹುಡುಕುತ್ತಾರೆ. ಐಷಾರಾಮಿ ಜೀವನ ಶೋಕಿಗಾಗಿ ಇತ್ತೀಚಿಗೆ ಕೆಲ ಯುವಕರು ಆನ್ಲೈನ್ ಬೆಟ್ಟಿಂಗ್ ಟ್ರೇಡಿಂಗ್ ಹೀಗೇ ನಾನಾ ರೀತಿಯಲ್ಲಿ ಹಣ ದ್ವಿಗುಣ ಮಾಡುವ ಸಾಹಸಕ್ಕೆ ಇಳಿಯುತ್ತಾರೆ ಅದರಲ್ಲೂ ಈ ಬಡ್ಡಿ ವ್ಯವಹಾರದ ದಂದೆ ಅಂತು ಎಗ್ಗಿಲ್ಲದೆ ನಡೆಯುತ್ತಿದೆ. ಕೇವಲ ಒಂದು ಪೈಸೆ ಎರಡು ಪೈಸೆ ಅಲ್ಲ ಮೀಟರ್ ಬಡ್ಡಿ, ವಾರದ ಬಡ್ಡಿ ದಿನದ ಬಡ್ಡಿ ಹೀಗೆ ದುಡ್ಡಿನ ಆಮಿಷಕ್ಕಾಗಿ 10. 20 ಪರ್ಸೆಂಟೇಜ್ ಆಗಿ ಬಡ್ಡಿ ವ್ಯವಹಾರ ಮಾಡುತ್ತಿರುವ ಯುವಕರು ಸಂಬಂಧಗಳ ಬೆಲೆ ಇಲ್ಲದೆ ಕೇವಲ ದುಡ್ಡಿಗಾಗಿ ವ್ಯವಹಾರ ನಡೆಸುತ್ತಿದ್ದಾರೆ.
ಬೆಳಗಾವಿ ಅ.1: ಇದೇ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಘಟನೆ ಒಂದು ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಖಣದಾಳ ಗ್ರಾಮದಲ್ಲಿ ನಿನ್ನೆ ದಿನ ಬೆಳಕಿಗೆ ಬಂದಿದೆ. ಹೌದು ವಾರದ ಬಡ್ಡಿ ವ್ಯವಹಾರ ಮಾಡುವ ಅದೇ ಗ್ರಾಮದ ನಾಗಪ್ಪ ವಡ್ಡರ ಸೋದರ ಸಂಬಂಧಿಯಾದ ರೋಹಿತ ವಡ್ಡರ ಎಂಬ ಯುವಕನಿಗೆ 2,000 ಎರಡು ಸಾವಿರ ರೂಪಾಯಿ ಸಾಲದ ರೂಪದಲ್ಲಿ ಹಣ ಕೊಟ್ಟಿದ ಆದರೆ ಆ ಕೊಟ್ಟ ಸಾಲಕ್ಕೆ ಪ್ರತಿವಾರ 500 ರೂಪಾಯಿಯಂತೆ ಬಡ್ಡಿ ಹಣವನ್ನು ವಸೂಲಿ ಮಾಡುತ್ತಿದ್ದ.
ಹೀಗೆ ವಾರದ ಬಡ್ಡಿ ಕೊಡಲು ವಿಳಂಬವಾದರಿಂದ ಏಕಾಏಕಿ ಕೋಪಿತಗೊಂಡ ನಾಗಪ್ಪನು ಅವಾಚ್ಯ ಶಬ್ದಗಳಿಂದ ಬೈದು ಯುವಕನನ್ನು ಕಲ್ಲಿನಿಂದ ಹೊಡೆದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ರಕ್ತ ಸ್ರಾವ ಆರಂಭವಾಗಿದ್ದರಿಂದ ತಕ್ಷಣ ಹಾರೂಗೇರಿ ಪಟ್ಟಣದ ರಿಷಿ ಅರ್ಥೋಕೇರ್ ಅಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಾಳು ರೋಹಿತನಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
ಇನ್ನೂ ಈ ಪ್ರಕರಣ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಹಾರೂಗೇರಿ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಇಂತಹ್ ಬಡ್ಡಿ ವ್ಯವಹಾರಗಳು ವಿಪರೀತ ರೀತಿಯಲ್ಲಿ ನಡೆಯುತ್ತಿದ್ದು ಇನ್ನಾದರೂ ಪೊಲೀಸ್ ಇಲಾಖೆ ಇಂತಹ ಬಡ್ಡಿಕೋರರ ದಂದೆಗೆ ಕಡಿವಾನ ಹಾಕಬೇಕಾಗಿದೆ.