ಬೆಳಗಾವಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ: ಕೆರೂರಿನಲ್ಲಿ ಪಿಯುಸಿ ಕಲಿತು  ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ ರಿಯಾಜ್  ಮುಲ್ಲಾ ಜೈಲು.

ನಕಲಿ ವೈದ್ಯ ರಿಯಾಜ್ ಮುಲ್ಲಾ

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಕೆಲದಿನಗಳ ಹಿಂದಷ್ಟೇ ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಮಕ್ಕಳ ಮಾರಾಟದ ಜಾಲ ಪತ್ತೆಯಾಗಿತ್ತು. ಇತ್ತೀಚಿಗಷ್ಟೇ ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಕ್ಕಳ ಮಾರಾಟದ ಕಿಂಗ್ ಪಿನ್ ಆದ ಕಿತ್ತೂರಿನ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ ಭ್ರೂಣಲಿಂಗ ಪತ್ತೆ ಮಾಡುವರ್ ಕುರಿತು ಮಾಹಿತಿ ನೀಡಿದರೆ ಸೂಕ್ತ ಬಹುಮಾನವನ್ನು ಘೋಷಣೆ ಮಾಡಿತ್ತು. ಇವೆಲ್ಲ ಬೆಳವಣಿಗೆಗಳ ಮೂಲಕ ಅಲರ್ಟ್ ಆದ  ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿನ ನಕಲಿ ವೈದ್ಯರ ಆಸ್ಪತ್ರೆಯ ಮೇಲೆ ದಾಳಿ ನಡೆಸಿದರು.

ಬೆಳಗಾವಿ ಜೂ.26 : ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಕಲಿ ವೈದ್ಯನಿಂದ ಭ್ರೂಣ ಹತ್ಯೆ ಮತ್ತು ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧ ನಗರ ಹಾಗೂ ತಾಲೂಕು ಗಳಲ್ಲಿರುವ ಆಸ್ಪತ್ರೆಗಳಿಗೆ ದಿಢೀರ್ ದಾಳಿ ನಡೆಸಿ  ತಪಾಸನೆ ಮಾಡಿದರು. ತಪಾಸನೆ ಮಾಡುವ ವೇಳೆ ಅನೇಕ ನಕಲಿ ಆಸ್ಪತ್ರೆಗಳು ಮತ್ತು ವೈದ್ಯರು ಪತ್ತೆಯಾಗಿದ್ದಾರೆ. ಇದೆ ವೇಳೆ ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದೆ ಕೇವಲ ಪಿಯುಸಿ ಪಾಸಾದ ನಕಲಿ ವೈದ್ಯನೊಬ್ಬ ಚಿಕ್ಕೋಡಿ ಜಿಲ್ಲೆಯ ಕೆರೂರು ಗ್ರಾಮದಲ್ಲಿ  ನಕಲಿ ವೈದ್ಯ ರಿಯಾಜ್ ಮುಲ್ಲಾ ಆಸ್ಪತ್ರೆಯನ್ನು ನಡೆಸುತ್ತಿದ್ದ. ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ. ಮಹೇಶ್ ಕೋಣಿ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸಂಜಯ ಡುಮ್ಮಗೋಳ ಆರೋಗ್ಯ ಇಲಾಖೆ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ನೇತೃತ್ವದ ತಂಡ ಸೋಮವಾರ ದಿನ ದಾಳಿ ಮಾಡಿ. ಆಸ್ಪತ್ರೆ ಪರಿಶೀಲಿಸಿದಾಗ ಈತ  ನಕಲಿ ವೈದ್ಯ ಎಂದು ತಿಳಿದು ಬಂದಿದೆ ತಕ್ಷಣ ಆಸ್ಪತ್ರೆಯನ್ನು ಸೀಸ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು.

ಈತ ನಕಲಿ ವೈದ್ಯನೆಂದು ತಿಳಿದ ಮೇಲೆ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ನಕಲಿ ವೈದ್ಯನಾದ ರಿಯಾಜ್ ಮುಲ್ಲಾಗೆ ಒಂದು ವಾರ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿದ್ದಾರೆ.  ಅದೇ ರೀತಿ ಬೆಳಗಾವಿ ನಗರದ ಬಡಕಲ್ ಗಲ್ಲಿಯ ಶಿವಾ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ ಎಸ್ ದೇವನಗಾಂವಿ ಆಸ್ಪತ್ರೆಯ ಮೇಲೆಯೂ ದಾಳಿ ನಡೆಸಿದ ಆರೋಗ್ಯ ಅಧಿಕಾರಿಗಳು ಆಸ್ಪತ್ರೆ ಸಿಸ್ ಮಾಡಿ ನೋಟಿಸ್ ನೀಡಿದ್ದಾರೆ.  ನಗರದ ಚವಾಟ ಗಲ್ಲಿಯ ಗುರು ಕೃಪಾ ಆಸ್ಪತ್ರೆಯ ಮೇಲೆಯೂ ದಾಳಿ ಮಾಡಿದ ಅಧಿಕಾರಿಗಳು ಅಕ್ರಮ ಆಸ್ಪತ್ರೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದ್ದರಿಂದ ಆಸ್ಪತ್ರೆ ಮಾಲೀಕರಾದ ಉಮೇಶ್ ಆಚಾರ್ಯಗೆ ನೋಟಿಸ್ ನೀಡಿ ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಿದಾರೆ.