ಕಳೆದ ತಿಂಗಳುಗಳಿಂದ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ವಿಕೃತ ಕಾಮುಕರಿಗೆ ಜಿಲ್ಲಾ ಪೊಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹಾಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಬ್ಬ ಅತ್ಯಾಚಾರಿಗೆ ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ ನ್ಯಾಯಾಲಯ.
ಬೆಳಗಾವಿ ಅ.9: ಕಳೆದ ಐದು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ದಿನಾಂಕ 14/01/2019 ರಂದು ಪ್ರೀತಿಯ ನಾಟಕವಾಡಿ ಮದುವೆಯಾಗೋಣ ಎಂದು ನಂಬಿಸಿ ಬಾಲಕಿಯ ಬಳಿ ಇದ್ದ ಒಡವೆಗಳನ್ನು ಗಿರವಿ ಇಟ್ಟು ಬಂದ ಹಣದಿಂದ ಪಕ್ಕದ ರಾಜ್ಯದ ಕೊಲ್ಹಾಪುರಕ್ಕೆ ಕರೆದುಕೊಂಡು ಹೋಗಿ ದಾಭಾ ಒಂದರ ಮಾಲೀಕರಿಗೆ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು ನಮಗೆ ಆಸರೆ ಕೊಡಿ ಎಂದು ಸುಮಾರು ಒಂದು ತಿಂಗಳುಗಳ ಕಾಲ ಅದೇ ದಾಭಾದಲ್ಲಿ ಕೆಲಸ ಮಾಡಿ ಆಸರೆಯನ್ನು ಪಡೆದಿದ್ದ.
ಹೀಗೆ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ಸಂಭೋಗ ಮಾಡಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಅವತ್ತಿನ ಖಡಕ್ ತನಿಖಾಧಿಕಾರಿಯಾದ ಬಿ ಆರ್ ಗಡ್ಡೇಕರ್ ಅವರು ಹೆಚ್ಚುವರಿ ಜಿಲ್ಲಾ ಮತ್ತು ಶಸ್ತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ 01 ಬೆಳಗಾವಿ ಇದಕ್ಕೆ ದೋಷಾರೋಪನೆ ಪಟ್ಟಿಯನ್ನು ಸಲ್ಲಿಸಿದರು.
ಇನ್ನು ಈ ಪ್ರಕರಣದ ಕುರಿತು ಒಟ್ಟು . 20 ಸಾಕ್ಷಿಗಳ ವಿಚಾರಣೆಯಿಂದ 38 ದಾಖಲೆಗಳು ಹಾಗೂ 15 ಮುದ್ದಮಾಲಗಳ ಆಧಾರದ ಮೇಲೆ ( 26 ) ವರ್ಷದ ಆರೋಪಿ ಚಂದ್ರು ಮೋಹನ್ ಹರಿಜನ್ ಬೆಳಗಾವಿ ನಗರದ ರುಕ್ಮಿಣಿ ನಗರದವನಾಗಿದ್ದು. ಈತನ ಮೇಲೆ ಆರೋಪನೆಗಳು ಸಾಬೀತಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಲಯ.
ಅದೇ ರೀತಿ ಅತ್ಯಾಚಾರಕ್ಕೆ ಒಳಗದ ನೊಂದ ಬಾಲಕಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಇನ್ನು ಈ ಪ್ರಕರಣವನ್ನು ಸರಕಾರದ ಪರವಾಗಿ ಶ್ರೀ ಎಲ್ ವಿ ಪಾಟೀಲ್ ಸರ್ಕಾರಿ ಅಭಿಯೋಜಕರು ಬೆಳಗಾವಿ ಇವರು ಪ್ರಕರಣದ ಕುರಿತು ವಾದ ಮಂಡಿಸಿದರು.