ಬೆಳಗಾವಿ: ಲೋಕಸಭೆ ಚುನಾವಣೆ ಪ್ರಯುಕ್ತ ಈಗಾಗಲೇ ಜಿಲ್ಲಾಧ್ಯಂತ ಚೆಕಪೋಸ್ಟ್ ಗಳಲ್ಲಿ ಬಿಗಿ ಭದ್ರತೆಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಲ್ಲೆಡೆ ಕಟ್ಟುನಿಟ್ಟಿನ ತಪಾಸನೆಯನ್ನು ಮಾಡಲಾಗುತ್ತಿದ್ದು ಇಂದು ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಮೂರು ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿರುವ ಕೊಗನೊಳಿ ಚೆಕ್ ಪೋಸ್ಟ್ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಗ್ರಾಮ. ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ನಿತಿನ್ ಎಂಬುವರು ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದಾಗ ವಶಕ್ಕೆ ಪಡೆದುಕೊಳ್ಳಲಾಗಿದೆ.