ಬೆಳಗಾವಿ: 3 ವರ್ಷದ ಕಂದಮ್ಮನ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ:

ಬೆಳಗಾವಿ ಸೆ.28: 7 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಕಲ್ ಕುರಬಗೋಡಿ ಗ್ರಾಮದ 3 ವರ್ಷದ ಪುಟ್ಟ ಕಂದಮ್ಮನ ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೈದು ಕಬ್ಬಿನ ಗದ್ದೆಯಲ್ಲಿ ಮುಚ್ಚಿ ಹಾಕಿದ ಆರೋಪಿಗೆ ಇದೀಗ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ.

ಪ್ರಕರಣದ ಕುರಿತು ಮಾಹಿತಿ

ದಿನಾಂಕ 21/09//2017 ರಂದು ಹಾರೂಗೇರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜೆ 5 ಘಂಟೆ 30 ನಿಮಿಷಕ್ಕೆ ಕುರಬಗೋಡಿ ಹಾರೂಗೇರಿ ಗ್ರಾಮದ ಆರೋಪಿ 32 ವರ್ಷದ ಉದ್ದಪ್ಪ ರಾಮಪ್ಪ ಗಾಣಿಗೇರ ಎಂಬ ವಿಕೃತ ಕಾಮುಕ 3 ವರ್ಷದ ಪುಟ್ಟ ಬಾಲಕಿಯನ್ನು ಆಕೆಯ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಬಲವಂತವಾಗಿ ಅಪಹರಿಸಿ ಕುರಬಗೋಡಿಯಲ್ಲಿರುವ ಭೀಮಪ್ಪ ನೇಮಪ್ಪ ನಾಗನೂರ ಎಂಬುವರ ಕಬ್ಬಿನ ಗದ್ದೆಯಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ವೇಸಗಿ ಕೊಲೆ ಮಾಡಿದ ನಂತರ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮಣ್ಣಲಿ ಮುಚ್ಚಿ ಹಾಕಿರುವ ಕುರಿತು ತನಿಖೆಯಲ್ಲಿ ಕಂಡು ಬಂದಿದ್ದರಿಂದ ಅಂದಿನ ತನಿಖಾಧಿಕಾರಿಯಾದ ಶ್ರೀ ಸುರೇಶ್ ಪಿ ಶಿಂಗಿ ಸಿಪಿಐ ಇವರು ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ ಈತನ ವಿರುದ್ಧ 8/12/2017 ರಂದು ದೋಷಾರೋಪಣ ಪತ್ರ ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿಯಲ್ಲಿ ವಿಚಾರಣೆ ಕೈಗೊಂಡು ಪ್ರಕರಣ ಕುರಿತು ಶ್ರೀ ಎಲ್ ಬಿ ಪಾಟೀಲ್ ಸಾರ್ವಜನಿಕ ಅಭಿಯೋಜಕರು ಬೆಳಗಾವಿ ಇವರು ಸರ್ಕಾರದ ಪರವಾಗಿ ವಾದ ಮಂಡಿಸಿ ವಿಕೃತ ಕಾಮುಕನಿಗೆ ಗಲ್ಲು ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.