ಬೆಳಗಾವಿ: ತಾಯಿ ಮಾಡಿದ ಸಾಲಕ್ಕೆ ಅಪ್ರಾಪ್ತ ಮಗಳ ಬಲವಂತದ  ಮದುವೆ!

ಬೆಳಗಾವಿ: ನಗರದ ತಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿ, ದೌರ್ಜನ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿಯ ತಾಯಿಯು ಡವಳಿ ಎಂಬುವರ್ ಹತ್ತಿರ 50 ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದಳು ಆದರೆ ಕೊಟ್ಟ ಸಾಲ ಮರು ಪಾವತಿಸಲು ಆಗದೆ ಇದ್ದಾಗ  ಮಗಳನ್ನು ವಿಶಾಲ ಡವಳಿ ಎಂಬುವನಿಗೆ ಬಲವಂತವಾಗಿ ಮದುವೆ ಮಾಡಿಸಲು ನಿರ್ಧರಿಸಿದ ಡವಳಿ ಕುಟುಂಬ ಅದೇ ಪ್ರಕಾರ 2024 ರ ಸೆ. 18 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಥಣಿಗೆ ಕರೆದುಕೊಂಡು ಹೋಗಿ ಅಥಣಿಯ ದೇವಸ್ಥಾನ ಒಂದರಲ್ಲಿ  ಬಾಲಕಿಯ ಒತ್ತಾಯಪೂರ್ವಕವಾಗಿ  ವಿಶಾಲ್ ಡವಳಿ ಈತನಿಗೆ  ಮದುವೆ ಮಾಡಿಸಿರುತ್ತಾರೆ.

ಮದುವೆಯ ನಂತರ  ಬಾಲಕಿಗೆ  ವಿಶಾಲ್ ಡವಳಿ ಹಾಗೂ ಆತನ ತಂದೆ ತಾಯಿಯರಿಂದ ಹಣಕ್ಕಾಗಿ ನಿತ್ಯ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಖುದ್ದು ಬಾಲಕಿಯೇ ತಿಳಕವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ನೊಂದ ಬಾಲಕಿ ಈಗಾಗಲೇ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದಾಳೆ

ಇದರ ಕುರಿತು ನಗರದ ಮಂಗಾಯಿ ನಗರದ ನಿವಾಸಿಗಳಾದ విಶಾల ಡವಳಿ, ರೇಖಾ ಡವಳಿ, ಪುಂಡಲೀಕ ಡವಳಿ, ಶ್ಯಾಮ ಡವಳಿ ಸೇರಿದಂತೆ ಇತರ 8 ಜನರ ವಿರುದ್ಧ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *