ಬೆಳಗಾವಿ ಅ.20: 207 ನೇ ವಚನ ಪೂರ್ಣಿಮೆ ಕಾರ್ಯಕ್ರಮ ನಿನ್ನೆ ದಿನಾಂಕ : 19-08-2024 ಸೋಮವಾರ ಶ್ರೀಮದ್ ಜಗದ್ಗುರು ಕಾಡಸಿದ್ಧೇಶ್ವರ ಮಠ ಕೊಣ್ಣೂರ ಹಾಗೂ ಬಸವ ಜಾಗೃತ ವೇದಿಕೆ ಕೊಣ್ಣೂರ, ದಿವ್ಯ ಸಾನಿಧ್ಯ ಶ್ರೀ ಮದ್ ಘನಲಿಂಗ ಚಕ್ರವರ್ತಿ ಡಾ|| ಪವಾಡೇಶ್ವರ ಮಹಾಸ್ವಾಮಿಗಳು ಕೊಣ್ಣೂರ ಮರಡಿಮಠ ಪ್ರವಚನ : ಮಾತೋಶ್ರೀ ಅನ್ನಪೂರ್ಣ ತಾಯಿ ಶಿವಾನಂದ ಮಠ ಹೊಸೂರ ಆಗಮಿಸಿ ಶ್ರಾವಣ ಮಾಸದ ಮಹತ್ವವನ್ನು ಸದ್ಭಕ್ತರಿಗೆ ತಿಳಿಸಿದರು.
ಶ್ರವಣದಿಂದ ಕೇಳುವುದರಿಂದ ದುಃಖ ಸಂತೋಷ ಹಾಗೂ ಎಲ್ಲ ವಿಧದ ಸಕಲ ಕಾರ್ಯಗಳನ್ನು ಸಕಾಲ ಗೊಳಿಸಲು ಸಾಧ್ಯ ವಾಗುವುದು ಶ್ರವಣದಿಂದ ಮಾತ್ರ ಎಂದು ಹೇಳಿದರು ಉಪನ್ಯಾಸಕರಾಗಿ ಶರಣ ಶ್ರೀ ಸೈಯದ್ ಬಾಷಿತ ಅಲಿ ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳು ಗೋಕಾಕ ಆಗಮಿಸಿ ಗುರುವಿನ ಸೇವೆ ಮಾಡಿದ ಹೊರೆತು ಮುಕ್ತಿ ಸಿಗದು ಎಂದು ಹೇಳಿದರು ಜೊತೆಗೆ ಜೊತೆಗೆ ಅಂದ ಬಸವಣ್ಣವರ ವಚನಗಳನ್ನು ಹೇಳಿ ಪ್ರತಿ ವಚನದ ಶಬ್ದಾರ್ಥಕ್ಕೆ ಒಂದೊಂದು ದೃಷ್ಟಾಂತವನ್ನು ನೀಡುತ್ತಾ ಭಕ್ತರಲ್ಲಿ ಕಾಯಕವೇ ಕೈಲಾಸ ಎಂಬ ನುಡಿಮುತ್ತುಗಳನ್ನು ಪೋಣಿಸಿದರು.
ಅಧ್ಯಕ್ಷತೆ : ಶರಣ ಶ್ರೀ ಅಶೋಕ ಈಶ್ವರ ಪರಮಶೆಟ್ಟಿ ಅನ್ನಪ್ರಸಾದ ಸೇವೆ : ಪರಮಶೆಟ್ಟಿ ಬಂಧುಗಳಿಂದ ಉಪಸ್ಥಿತಿ ಶ್ರೀ ಗುರುವಯ್ಯ ಬಾಬಯ್ಯ ಹಿರೇಮಠ, ಶ್ರೀ ತಮ್ಮಣ್ಣಾ ಕಳಸನ್ನವರ , ಶ್ರೀ ಅಕ್ಷಯ ಹಿರೇಮಠ ಬಸವ ಜಾಗೃತ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀ ಅನಿಲಕುಮಾರ ಪಿರಪ್ಪಾ ಯರನಾಳ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸಿದ್ದಪ್ಪಾ ನೇಮಪ್ಪಾ ದಪ್ಪಾದೂಳಿ ಶಿಕ್ಷಕರು ನಿರುಪಿಸಿದರು