ಅರಿಯದ ವಯಸ್ಸಿನಲ್ಲಿ ಊರಲ್ಲಿರುವ ಕಳ್ಳನ ಪ್ರೀತಿಸಿ ಮದುವೆಯಾದ ಯುವತಿ, ಜಾತ್ರೆಯ ವೇಳೆ ನಾಲೆಯ ಬಳಿ ಗಂಡನ ಕೈಯಲ್ಲೇ ಹತ್ಯೆಯಾದ ಚೆಂದುಳ್ಳ ಚೆಲುವಿ.

ಕೊಲೆ ಆರೋಪಿ ಚರಣ್ ಮತ್ತು ಮೃತ ದುರ್ದೈವಿ ಮೇಘಾ

ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಪ್ರಣಯ ಅಂತ ಊರಲ್ಲಿ ತಿರುಪೇ ಶೋಕಿ ಮಾಡುವ ಕಳ್ಳನ ಪ್ರೀತಿಗೆ ಮೈಸೋತು ಆತನನ್ನೇ ಮದುವೆಯಾಗಿ. ಆರು ತಿಂಗಳಲ್ಲೇ ಅವನಿಂದ ದೂರ ಉಳಿದ ಪತ್ನಿ, ಊರ ಜಾತ್ರೆಯ ದಿನ ನಾಲೆಯಲ್ಲಿ ರಕ್ತದ ಮಡುವಿನಲ್ಲಿ ಬಲಿಯಾದ ಚಂದುಳ್ಳ ಚೆಲುವೆಯ ದುರಂತ ಪ್ರೇಮ ಕಥೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕರಗುಚ್ಚಿ ಗ್ರಾಮದಲ್ಲಿ.

ಚಿಕ್ಕಮಗಳೂರು: ಹೌದು ಊರಿಗೆ ಬೇಡಾದ ಕಳ್ಳನ ಪ್ರೀತಿಗೆ ಸೋತು ಅಪ್ರಾಪ್ತ ವಯಸ್ಸಿನಲ್ಲಿ ಶಾಲೆ ಕಲಿಯುವ ವಯಸ್ಸಲ್ಲೆ ಆತನೇ ಬೇಕು ಅಂತ ಮದುವೆಯಾದ ಯುವತಿ ಮೇಘಾ ದುರಂತ ಸಾವಿನಲ್ಲಿ ಅಂತ್ಯ ಕಂಡಿದ್ದಾಳೆ. ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಆದರೆ ಮದುವೆಯಾದ ಆರೂ ತಿಂಗಳಲ್ಲಿ ಗಂಡನ ನರಕ ವೇದನೆಗೆ ಬೇಸತ್ತು,  ತಾಯಿ ಜೊತೆ ತವರು ಮನೆ ಸೇರಿದ ಯುವತಿ, ಇಬ್ಬರೂ ಒಂದೇ ಊರಿನಲ್ಲಿ ಇರುವುದರಿಂದ ತವರು ಮನೆಗೆ ಬಂದು ಗಂಡನಿಂದ ದಿನ ನಿತ್ಯ ಕಿರುಕುಳ ಸಹಿಸದೆ ಕೊನೆಗೆ ಊರೆ ಬಿಟ್ಟು ಹೋಗಿದ್ದ ತಾಯಿ ಮಗಳು ಊರ ಜಾತ್ರೆಗೆಂದು ಊರಿಗೆ ಬಂದವಳನ್ನು ಭದ್ರಾ ನಾಲೆಯಲ್ಲಿ ಹೆಣವಾಗಿ ಕೆಡವಿದ ಕಟುಕ ಗಂಡ.

ಚಿಕ್ಕಮಗಳೂರ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗ್ರಾಮದ ಮುಳಕಟ್ಟಮ್ಮ ಜಾತ್ರೆ ಅಂದ್ರೆ ಊರ ಸುತ್ತ್ ಮುತ್ತಲಿನ ಹಳ್ಳಿಯ ಜನರು ಸೇರಿ ಆಚರಿಸುವ ಉತ್ಸವ ಅದೇ ರೀತಿ ಕೆಲಸಕ್ಕೆ ಅಂತ ಊರ್ ಬಿಟ್ಟ್ ಜನ ಜಾತ್ರೆಯ ಸಂದರ್ಭದಲ್ಲಿ ಊರಿಗೆ ಬಂದು ಉತ್ಸವದಲ್ಲಿ ಭಾಗವಹಿಸುವುದು ಖುಷಿಯೆ ಬೇರೇ ಹಾಗೇ ಊರ್ ಜಾತ್ರೆಯ ನಿಮಿತ್ಯ 2 ವರ್ಷಗಳಿಂದ ಊರ್ ಬಿಟ್ಟು ಹೋಗಿದ್ದ ಕೊಲೆಯಾದ ಮೇಘಾ ಮತ್ತು ತಾಯಿ ಕೋಮಲ ಇಬ್ಬರೂ ಕೂಡ ಊರಿಗೆ ಬಂದು ಮನೆಯ ಸ್ವಚ್ಛ ಗೊಳಿಸಿ ಮೇಘಾ ಮಧ್ಯಾಹ್ನದ ನಂತರ ಒಬ್ಬಂಟಿಯಾಗಿ ನಾಲೆಗೆ ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಮೇಘಾ ಊರಿಗೆ ಬಂದ ವಿಚಾರ ಅರಿತ ಚರಣ ಅವಳನ್ನು ಹಿಂಬಾಲಿಸಿ ಹೋಗಿ ಹಲ್ಲೆ ಮಾಡಲು ಉದ್ದೇಶದಿಂದಲೇ ಜೋತೆಗೆ ಮಚ್ಚು ತೆಗೆದುಕೊಂಡು ಹೋಗಿದ್ದ ನಾಲೆಯಲ್ಲಿ ಬಟ್ಟೆ ತೊಳೆಯುತ್ತಿರುವ ಮೇಘಾಳ ಮೇಲೆ ಏಕಾಏಕಿ ಹಲ್ಲೆ ಮಾಡಿ ತಲೆ ಮತ್ತು ಕೈಗೆ ಕೊಚ್ಚಿ ಪರಾರಿಯಾಗಿದ್ದನು.

ಮೇಘಾ ನಾಲೆಯಲ್ಲಿ ಒಬ್ಬಳೆ ಇದ್ದುದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೇಘಾ ನೀರಿನಲ್ಲೇ ಜೀವ ಬಿಟ್ಟಿದ್ದಳು, ಇದನು ನೋಡಿದ ಗ್ರಾಮಸ್ಥರು ಲಕ್ಕವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರೀತಿಸಿ ಮದುವೆಯಾದ ಮೇಘಾ ಮತ್ತು ಚರಣ ಬಾಳಿ ಬದುಕಬೇಕಾಗಿದ್ದ ವಯಸ್ಸಿನಲ್ಲಿ ಮೇಘಾ ಸಾವಿನಲ್ಲಿ ಅಂತ್ಯ ಕಂಡರೆ ದುಷ್ಟ್ ಗಂಡ ಕೊಲೆ ಆರೋಪಿ ಚರಣ ಜೈಲು ಪಾಲಾಗಿದ್ದಾನೆ. ಊರ ಜನರು ಜಾತ್ರೆಯ ಸಡಗರದಲ್ಲಿ ಇರಬೇಕಾಗಿದ್ದ ಸಂದರ್ಭದಲ್ಲಿ ಮೇಘಾಳ ಕೊಲೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಕೊಲೆ ಆರೋಪಿ ವಿರುದ್ಧ ಮೇಘಾಳ ತಾಯಿ ಕೋಮಲ ಲಕ್ಕವಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.