ಆಲಕನೂರು ಕರಿಸಿದ್ದೇಶ್ವರ ಆಣೆ ತುಳಿದು ಮಾವುತ ಸಾವು.

ಬೆಳಗಾವಿ ಡಿ. 23: ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಪ್ರಸಿದ್ಧ  ಅಲಕನೂರು ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ದ್ರುವ ಎಂಬ ಆಣೆ ಮಾವುತನನ್ನೇ   ಕಾಲಿನಿಂದ ತುಳಿದು ಕೊಂದಿರುವ  ಘಟನೆ ಇಂದು ಬೆಳಿಗ್ಗೆ 7:00 ಘಂಟೆ ಸುಮಾರಿಗೆ ನಡೆದಿದೆ.

ಪ್ರತಿ ದಿನ ಎಂದಿನಂತೆ ಇಂದು  ಕೂಡ ಆನೆಗೆ ಮೇವು ಹಾಕಲು ಹೋದ ಧರೆಪ್ಪ ಎಂಬ ಮಾವುತನ ಮೇಲೆ ಆಣೆ ದಾಳಿ ಮಾಡಿ ಸೊಂಡಿಲಿನಿಂದ ತಿವಿದು ಕಾಲಿನಿಂದ ತುಳಿದ ಪರಿಣಾಮ ಆಣೆಯ  ಮಾವುತ ಧರೆಪ್ಪ ಬೇವನೂರ (31) ಸಾವನಪ್ಪಿದ್ದಾನೆ.

ಕರಿಸಿದ್ದೇಶ್ವರ ದೇವಸ್ಥಾನದ (21) ವರ್ಷದ ದ್ರುವ ಎಂಬ ಗಂಡು ಆಣೆಯು ನಿನ್ನೆ ದಿನ ಮದ ಬಂದ ಹಾಗೆ  ಆಗಿತ್ತು. ಇಂದು ಬೆಳಿಗ್ಗೆ ಕೂಡ ಮಾವುತ ಆಣೆಗೆ ಮೇವು ಹಾಕಲು ಹೋದ ಸಂದರ್ಭದಲ್ಲಿ ಕೂಡ ಮಧ ಬಂದ ಕಾರಣ ಸಾಕಿದ ಮಾವುತನನ್ನೇ ತುಳಿದು  ಕೊಂದಿರುವ ಘಟನೆ ನಡೆದಿದೆ.

ಇನ್ನೂ ಆನೆಯ ತುಳಿತಕ್ಕೆ ಬಲಿಯಾದ  ಮೃತ ದುರ್ದೈವಿ  ಧರಿಯಪ್ಪ ಬೇವನೂರನಿಗೆ ಕಳೆದ 10 ದಿನಗಳ ಹಿಂದೆ ಅಷ್ಟೇ  ಗಂಡು ಮಗು ಜನನವಾಗಿತ್ತು.  ಧರಿಯಪ್ಪನನ್ನು ಕಳೆದುಕೊಂಡ ಕುಟುಂಬಸ್ಥರ  ಆಕ್ರಂದನ ಮುಗಿಲು ಮುಟ್ಟಿತ್ತು.

ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.