ಅಕ್ರಮ ಮರಳು ಸಾಗಾಟ ಟ್ರ್ಯಾಕ್ಟರ್ ಬೆನ್ನಟ್ಟಿದ,  ಪೋಲೀಸ ವಾಹನ ಪಲ್ಟಿ.

ಪಲ್ಟಿಯಾದ್ ಪೋಲಿಸ ವಾಹನ

ಅಕ್ರಮ ಮರಳು ಸಾಗಾಟ ದಂಧೆಕೋರರನ್ನು ಸಿನಿಮೀಯ ರೀತಿಯಲ್ಲಿ ಹಿಡಿಯಲು ಬೆನ್ನಟ್ಟಿದ ಪೋಲಿಸ್ ವಾಹನ ಪಲ್ಟಿಯಾದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

ರಾಯಚೂರು: ಅಕ್ರಮವಾಗಿ ಮರಳು ಸಾಗಾಟದಲ್ಲಿ ತೊಡಗಿದ್ದ ದಂಧೆಕೋರರ ಮರಳಿನ ಟ್ರ್ಯಾಕ್ಟರ್ ವಶಪಡಿಸಲು ಓವರ್ ಟೇಕ್ ಮಾಡಿದ ಸಮಯದಲ್ಲಿ ಪೋಲೀಸ್ ವಾಹನ ಪಲ್ಟಿಯಾಗಿ ಹೋಮ ಗಾರ್ಡ್ ಶಕ್ಷಾವಲಿ (33), ಹಾಗೂ ಪೊಲೀಸ್ ಪೇದೆ ಕರಿಯಪ್ಪ (35) ಎಂಬುವವರು ಗಾಯವಾಗಿದೆ, ಅಕ್ರಮ ಮರಳು ದಂಧೆ ಕೋರರ ಹಿಡಿಯಲು ಹೋಗಿ ಈ ದುರ್ಘಟನೆ ಸಂಭವಿಸಿ ಅಪಘಾತವಾಗಿದೆ.

ಇನ್ನು ಈ ದುರ್ಘಟನೆಯಲ್ಲಿ ಗಾಯಾಳುಗಳಾದ ಪೋಲಿಸ್ ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಸಿಂಧನೂರು ತಾಲೂಕ ಅಸ್ಪತ್ರೆಗೆ ದಾಖಲು ಮಾಡಲಾಗಿದೆ, ಇಷ್ಟೆಲ್ಲಾ ಘಟನೆ ನಡೆದರು ಕೊನೆಗೆ ಅಕ್ರಮ ಮರಳು ದಂಧೆಕೋರರ ವಾಹನವನ್ನು ಬಂಧಿಸಿದ್ದಾರೆ. ಸಿಂಧನೂರು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.