ವಿಜಯಪುರ: ನಗರದಲ್ಲಿ ಅಮಾನವೀಯ ಘಟನೆ, ಇಟ್ಟಂಗಿ ಬಟ್ಟಿಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ. ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು. ವಿಜಯಪುರ ನಗರದ ಹೊರಭಾಗದಲ್ಲಿರು ಇಟ್ಟಂಗಿ ಬಟ್ಟಿಯಲ್ಲಿ ಘಟನೆ. ಖೇಮು ರಾಠೋಡ ಎಂಬಾತ ಇಟ್ಟಂಗಿ ಬಟ್ಟಿ ಮಾಲಿಕನಿಂದ ಮಾರಣಾಂತಿಕ ಹಲ್ಲೆ. ಸದಾಶಿವ ಬಸಪ್ಪ ಮಾದರ (27), ಸದಾಶಿವ ಚಂದ್ರಪ್ಪ ಬಬಲಾದಿ ( 38), ಉಮೇಶ ಮಾಳಪ್ಪ ಮಾದರ (25) ಎಂಬಾತರ ಮೇಲೆ ಮಾರಣಾಂತಿಕ ಹಲ್ಲೆ. ಹಲ್ಲೆಯ ಬಳಿಕ ವಿಡಿಯೋ ಮಾಡಿ ಇನ್ಸ್ಟಾಗ್ರಾಂ ಗೆ ಹಾಕಿದ ದುಷ್ಕರ್ಮಿಗಳು. ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು. ಪ್ರತಿದಿನ 600 ರೂ. ಕೂಲಿ ಪಡೆಯುತ್ತಿದ್ದ ಕಾರ್ಮಿಕರು. ಸಂಕ್ರಮಣಕ್ಕೆಂದ ಮನೆಗೆ ತೆರಳಿದ್ದರು. ಸಂಕ್ರಮಣ ಮುಗಿಸಿ 16 ರಂದು ವಾಪಸ್ ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಇಟ್ಟಂಗಿ ಬಟ್ಟಿ ಮಾಲೀಕನಿಂದ ಮಾರಣಾಂತಿಕ ಹಲ್ಲೆ.
ಹಲ್ಲೆ ಮಾಡಿದ ವಿಡಿಯೋ ಲಿಂಕ್ 👇
https://www.instagram.com/reel/DFF6a39zAS3/?igsh=ZHR5Z2JsbmZ4eWh2
ವಿಜಯಪುರ ನಗರದ ಹೊರಬಾಗದ ಇಟ್ಟಿಗೆ ಬಟ್ಟಿಯಲ್ಲಿ ನಡೆದಿದ್ದ ಘಟನೆ ಇದಾಗಿದ್ದು ಮುಂಗಡ ಹಣ ನೀಡಿದ್ದರ, ಕೆಲಸ ಮಾಡುವ ವಿಚಾರದ ಕುರಿತು ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಪೈಪ್ ಗಳಿಂದ ಪಾದಗಳಿಗೆ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು.
ಇಟ್ಟಿಗೆ ಬಟ್ಟಿಯ ಮಾಲೀಕ ಖೇಮು ರಾಥೋಡ್ ಹಾಗೂ ಸಹಚರರಿಂದ ಹಲ್ಲೆ ಮಾಡಿರುವ ಘಟನೆ ಕುರಿತು ವಿಜಯಪುರ ಜಿಲ್ಲಾ ಎಸ್ ಪಿ ಲಕ್ಷ್ಮಣ ನಿಂಬರಿಗೆ ಹೇಳಿಕೆ ನೀಡಿ ಪೋಲಿಸ್ ಇಲಾಖೆ ಈಗಾಗಲೇ ಹಲ್ಲೆ ಮಾಡಿದವರ ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದೆ ಘಟನೆಗೆ ಸಂಬಂಧಪಟ್ಟಂತೆ ಖೇಮು ರಾಥೋಡ್ ಹಾಗೂ ಓರ್ವನನ್ನ ಬಂಧಿಸಲಾಗಿದೆ ಪರಾರಿಯಾಗಿರುವ ಇತರೆ ಮೂವರು ಆರೋಪಿಗಳನ್ನು ಬಂಧಿಸಲು ಜಾಲ ಬೀಸಲಾಗಿದೆ ಆದಷ್ಟು ಬೇಗ ಪರಾರಿಯಾಗಿರುವವರನ್ನು ಬಂಧಿಸುತ್ತೇವೆ ಜಮಖಂಡಿ ಮೂಲದ ಕಾರ್ಮಿಕರು ಇಟ್ಟಂಗಿ ಭಟ್ಟಿಯ ಕೆಲಸಕ್ಕೆ ಇಲ್ಲಿ ಬಂದಿದ್ದರು ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಬರುವುದು ತಡವಾದ ಕಾರಣಕ್ಕೆ ಹಲ್ಲೆ ಆಗಿದೆ ಕೇಮು ರಾಥೋಡ್ ಹಾಗೂ ಆತನ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಹಲ್ಲೆ ಮಾಡಿದವರ ಮೇಲೆ ಕಠಿಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಎಸ್ಪಿ ಲಕ್ಷ್ಮಣ ನಿಂಬರಗಿ