ಬೀದರ ಜ. 16: ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಎಸ್ ಬಿ ಐ (SBI) ಬ್ಯಾಂಕ atm ಗೆ ಹಣ ಹಾಕಲು ಬಂದ ಸಿಬ್ಬಂದಿಗಳ ಮೇಲೆ ಹಾಡಹಗಲೇ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ಮಾಡಿ ಹಣದ ಪೆಟ್ಟಿಗೆಯನ್ನು ಕದ್ದೋಯ್ದ ಘಟನೆ ಇಂದು ನಡೆದಿದೆ.
ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಗಳ ಮೇಲೆ ಹೊಂಚು ಹಾಕಿ ಇನ್ನೇನು ಹಣ ಹಾಕುವಷ್ಟರಲ್ಲಿ sbi ಸಿಬ್ಬಂದಿಗಳ ಮೇಲೆ ಏಕಾಏಕಿ ದಾಳಿ ಮಾಡಿ ಕಾರದಪುಡಿ ಎರಚಿ, ಐದು ಸುತ್ತಿನ ಗುಂಡಿನ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಇದ್ದ ಹಣದ ಪೆಟ್ಟಿಗೆ ಹೊತ್ತೋಯ್ದ ಕದೀಮರು. ಹಣ ಕದ್ದೋಯ್ಯುವಾಗ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನಪ್ಪಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ದುಷ್ಕರ್ಮಿಗಳು ಪರಾರಿಯಾಗುತ್ತಿರುವ ದ್ರಶ್ಯ 👇
https://www.facebook.com/share/r/19yw2sRsEc/
ಹಣದ ಪೆಟ್ಟಿಗೆಯನ್ನು ಕದ್ದುೊಯ್ಯುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಯನ್ನು ನಡೆಸಿದ್ದಾರೆ.https://youtube.com/shorts/3KLWMx-UaGQ?feature=share