ಬೆಂಗಳೂರು: ರಾಜ್ಯದ ಸೀನಿಯರ್ ಹಾಗೂ ಸಬ್ ಜೂನಿಯರ್ ಕಬಡ್ಡಿ ತಂಡಗಳ ಆಯ್ಕೆ ಇದೇ ಫೇ 20ಕ್ಕೆ

ವಿಷಯ:- ಬಿಹಾರ್ ನಲ್ಲಿ ನಡೆಯುವ *33ನೇ * ರಾಷ್ಟ್ರೀಯ ಸಬ್ ಜೂನಿಯರ್ ಕಬಡ್ಡಿ ಚಾಂಪಿಯನಶಿಪ್* ಗೆ ಹಾಗೂ 70 ನೇ ಸೀನಿಯರ್ ಪುರುಷರ ಕಬಡ್ಡಿ ಚಾಂಪಿಯನಷಿಪ್ ಗೆ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ವತಿಯಿಂದ ಕರ್ನಾಟಕ ಪುರುಷರ ಸೀನಿಯರ್ ರಾಜ್ಯ ಕಬಡ್ಡಿ ತಂಡದ ಆಯ್ಕೆ ಹಾಗೂ ಸಬ್ ಜೂನಿಯರ್ ಬಾಲಕ ಬಾಲಕಿಯ ಆಯ್ಕೆ ಪ್ರಕ್ರಿಯೆಯು ದಿನಾಂಕ 20.02.2024ರ ಮಂಗಳವಾರ ಮುಂಜಾನೆ 8-00 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರಿನಲ್ಲಿ ಆಯ್ಕೆಯ ನಡೆಯಲಿದ್ದು ಆದಕಾರಣ ಪ್ರತಿ ಜಿಲ್ಲೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಮ್ಮ ತಮ್ಮ ಜಿಲ್ಲೆಯ ಕಬಡ್ಡಿ ಕ್ರೀಡಾಪಟುಗಳನ್ನು ಈ ಆಯ್ಕೆ ಪ್ರಕ್ರಿಯೆ ಗೆ ಕಳುಹಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ವಿಶೇಷ ಸೂಚನೆ
ಸೀನಿಯರ್ ಪುರುಷರ ಕಬಡ್ಡಿ ಕ್ರೀಡಾಪಟುಗಳ ತೂಕ 85 kg ಒಳಗೆ ಇರಬೇಕು ಹಾಗೂ ಸಬ್ ಜೂನಿಯರ್ ಬಾಲಕ ಬಾಲಕಿಯ ಕಬಡ್ಡಿ ಕ್ರೀಡಾಪಟುಗಳ ತೂಕ 55 ಕೆಜಿ ಒಳಗಿರಬೇಕು ಹಾಗೂ 16 ವರ್ಷದ ಒಳಗಿನವರಾಗಿರಬೇಕು ಕಡ್ಡಾಯವಾಗಿ ಆಧಾರ್ ಕಾರ್ಡ್ ತರತಕ್ಕದ್ದು ಹಾಗೂ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಜಿಲ್ಲೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪರವಾನಿಗೆ ಪಡೆದು (ಲೆಟರ್ ಪ್ಯಾಡ್) ತರತಕ್ಕದ್ದು ಪ್ರತಿ ಜಿಲ್ಲೆಯಿಂದ 5 ಬಾಲಕರು
5 ಬಾಲಕಿಯರು
ಮತ್ತು
5 ಸೀನಿಯರ್ ಪುರುಷರು
ಕ್ರೀಡಾಪಟುಗಳು ಭಾಗವಹಿಸತಕ್ಕದ್ದು

ಇಂತಿ ತಮ್ಮ ವಿಶ್ವಾಸಿ
ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ)