ಧಾರವಾಡ ಡಿ. 29: ಡಿಸೆಂಬರ್ 22 ರಂದು ಹುಬ್ಬಳಿಯ ಸಾಯಿ ನಗರದಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಪೋಟವಾದ ಕಾರಣ ಒಟ್ಟು 9 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು ಅದರಲ್ಲಿ 4 ಜನ ಮಾಲಾಧಾರಿಗಳು ಈಗಾಗಲೇ ಸಾವನಪ್ಪಿದ್ದು ಈಗ ಇದೆ ಪ್ರಕರಣಕ್ಕೆ ಸಂಭವಿಸಿದಂತೆ ಮತ್ತೋರ್ವ ಮಾಲಾಧಾರಿಯಾದ ಶಂಕರ ಚವ್ಹಾನ ಅವರು ಮೃತಪಟ್ಟಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.
ಮೃತ ಅಯ್ಯಪ್ಪಸ್ವಾಮಿ ಮಾಲಧಾರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 13 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.ಹುಬ್ಬಳಿಯ ಉಣಕಲ್ ನಿವಾಸಿಯಾದ ಶಂಕರ ಅವರ ದುರಾದೃಷ್ಟವೆಂದರೆ ಚಿಕ್ಕ ವಯಸ್ಸಿನಲ್ಲಿಯೆ ಹೆತ್ತ ತಂದೆ ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದಿದ್ದರು. ಶಂಕರ ಅವರು ಮೊದಲ ಬಾರಿಗೆ ಅಯ್ಯಪ್ಪ ಸ್ವಾಮೀ ಮಾಲೆ ಧರಿಸಿದ್ದರು ಆದರೆ ಸಿಲಿಂಡರ ಸೋರಿಕೆಯಿಂದ ಸ್ಫೋಟವಾದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು 9 ದಿನಗಳ ಕಾಲ ಜೀವನ್ಮರನದ ಹೋರಾಟದಲ್ಲಿ ಬದುಕುಳಿಯದೆ ಕೊನೆಗೂ ಕೊನೆ ಉಸಿರೇಳೆದರು. ಹೀಗಾಗಿ ಮೃತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.