ಬೆಳಗಾವಿ ಬಿಮ್ಸ್ ನ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ?

ರಾಜ್ಯದಲ್ಲಿ ಬಾಣಂತಿಯರ  ಸರಣಿ ಸಾವುಗಳಿಂದ ನಿರಂತರ ಸುದ್ದಿಯಾದರು ಎಚ್ಚೆತ್ತುಕೊಳ್ಳದ ಸರ್ಕಾರ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿನ್ನೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಿಗೀಡಾಗಿದ್ದಾಳೆಂದು  ಕುಟುಂಬಸ್ಥರ ಆರೋಪ.

ಬೆಳಗಾವಿ ಡಿ. 22: ಜಿಲ್ಲೆಯ ಹುಕ್ಕೇರಿ ತಾಲೂಕಿನ  ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ಎಂಬ  ಮಹಿಳೆ  ಹೆರಿಗೆಗೆಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಬೆಳಿಗ್ಗೆ ಸಿಜರಿನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ ವೈಶಾಲಿ. ಆರಾಮಾಗಿಯೇ ಇದ್ದಳು ಆದರೆ ಇಂದು ಬೆಳಿಗ್ಗೆ ಏಕಾಏಕಿ  7.ಘಂಟೆ ಸುಮಾರಿಗೆ ವೈಶಾಲಿಗೆ ಎದೆ ನೋವು ಕಾಣಿಸಿದೆ ಎಂದು ಹೇಳಿದರು ಕೂಡ 10.30ರ ವರೆಗೂ ಆಸ್ಪತ್ರೆಯ ಸಿಬ್ಬಂದಿಗಳು ಯಾರೊಬ್ಬರು ಕೂಡ ಚಿಕಿತ್ಸೆ ನೀಡಲು ಬರಲಿಲ್ಲ ಎಂದು ಮೃತ ಬಾಣಂತಿ ಅತ್ತೆ ಈರವ್ವ ಹೇಳಿದರು.

ಬಾಣಂತಿ ವೈಶಾಲಿಯನ್ನು ಚಿಕಿತ್ಸೆಗೆಗಾಗಿ ಐ ಸಿ ಯುನಲ್ಲಿ ದಾಖಲಿಸಿದರು ಕೂಡ ಚಿಕೆತ್ಸೆ ಫಲಿಸದೇ ಸಾವನಪ್ಪಿದ್ದಾರೆ. ಇನ್ನು ವೈಶಾಲಿ ಮೃತ ದೇಹದ ಮರಣೊತ್ತರ ಪರೀಕ್ಷಿ ಭೀಮ್ಸ್ ನಲ್ಲಿ ಆಗಬಾರದೆಂದು ಪಟ್ಟು ಹಿಡಿದ ಕುಟುಂಬಸ್ಥರು, ನಮಗೆ ಈ ಆಸ್ಪತ್ರೆ ವೈದ್ಯರ ಮೇಲೆ  ನಂಬಿಕೆ ಇಲ್ಲ ಎಂದು ಅಗ್ರಹಿಸಿದರು. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ದೌಡಾಯಿಸಿದ ಎ ಪಿ ಎಮ್ ಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಗಂಡನ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಮೃತ ವೈಶಾಲಿ

ಎರಡು ದಿನಗಳ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಮೃತ ಬಾಣಂತಿ ವೈಶಾಲಿ. ಗಂಡನ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾದ ವೈಶಾಲಿ ಹೆಣ್ಣು ಮಗುವಿಗೆ ಜನ್ಮ್ ನೀಡಿ ಕೊನೆಯುಸಿರೆಳೆದರು.