ಬೆಳಗಾವಿ ಚಳಿಗಾಲ ಅಧಿವೇಶನ :
ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ವಿವಿಧ ಬೇಡಿಕೆ ಅಗ್ರಹಿಸಿ ಪ್ರತಿಭಟನೆ
ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಸರ್ಕಾರದ ವಿರುದ್ಧ ಆಕ್ರೋಶ
ಸಂವಿಧಾನ ಪೀಠಿಕೆ ಓದುವುದರ ಮೂಲಕ ಹೋರಾಟ ಕೈಗೊಂಡ ಅತಿಥಿ ಶಿಕ್ಷಕರ ಸಂಘ
ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು
2025-26ನೇ ವರ್ಷದ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಮೆರಿಟ್ ಪದ್ಧತಿ ಕೈ ಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು.
ಪ್ರತಿ ಮಾಸಿಕ ಕನಿಷ್ಠ ರೂ 30000 ಗೌರವ ಧನ ನೀಡಬೇಕು
ಬೆಳಗಾವಿ ಸುವರ್ಣ ಗಾರ್ಡನ್ ನಲ್ಲಿ ನಡೆದಿರುವ ಪ್ರತಿಭಟನೆ.
ಮುಂದಿನ 2025-26ನೇ ವರ್ಷದ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಮೆರಿಟ್ ಪದ್ಧತಿ ಕೈ ಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡಿ ಸರ್ಕಾರಿ ಸುತ್ತೋಲೆ ಹೊರಡಿಸಬೇಕು
ಪ್ರತಿ ತಿಂಗಳಿಗೆ ಒಂದು ರಜೆಯಂತೆ ವರ್ಷಕ್ಕೆ 12 ತುರ್ತು ಸಾಂದರ್ಭಿಕ ರಜೆಯನ್ನು ಅಧಿಕೃತವಾಗಿ ಜಾರಿಗೊಳಿಸುವುದು.
ಪ್ರತಿ ವರ್ಷವ ಕರ್ತವ್ಯ ನಿರ್ವಹಿಸಿದ ಶಾಲೆಯಿಂದ ಆಯಾ ಮುಖ್ಯ ಶಿಕ್ಷಕರು/ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇವಾ ಪ್ರಮಾಣ ಪತ್ರ ನೀಡಬೇಕ
ಶಿಕ್ಷಕ ಎಂಬ ಪದನಾಮ ತೆಗೆದು ಹಾಕಿ ಅರೆಕಾಲಿಕ/ಹಂಗಾಮಿ/ಹಂಸು/ಹೊರಗುತ್ತಿಗೆ ಶಿಕ್ಷಕರು ಎಂದು ನೇಮಕ ಮಾಡಿಕೊಳ್ಳಬೇಕು.
ಕರ್ತವ್ಯದ ಅವಧಿಯಲ್ಲಿ ನಮ್ಮ ಮಹಿಳಾ ಶಿಕ್ಷಕರಿಗೆ ಗೌರವ ಸಂಭಾವನೆ ಸಹಿತ ಗರ್ಭಿಣಿ ರಜೆ ನೀಡುವುದು.
ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು.