ಬೆಳಗಾವಿ : ಹೆತ್ತ ಮಗುವನ್ನು ಕೆರೆಗೆ ಎಸೆದು ಕೊಲ್ಲಲು ಯತ್ನಿಸಿದ ಕ್ರೂರಿ ತಾಯಿಯ ಬಂಧನ.

ಬೆಳಗಾವಿ : ಈ ಜಗತ್ತಿನಲ್ಲಿ ತಾಯಿಗೆ ಸಮನಾದ ಪದ ಇನ್ನೊಂದಿಲ್ಲ. ತಾಯಿ ಅಂದರೇ ಕರುಣಾಮಯಿ, ತಾಯಿ ಅಂದರೆ ಸರ್ವಸ್ವ, ತಾಯಿ ಅಂದರೆ ತ್ಯಾಗಮಯಿ, ಹೀಗೆ ತಾಯಿ ಬಗ್ಗೆ ಹೇಳಬೇಕಂದರೆ ಪದಗಳೇ ಸಾಲುವುದಿಲ್ಲ. ಆದರೆ ಇಲ್ಲೊಬ್ಬ ಕ್ರೂರ ಮನಸ್ಸಿನ ತಾಯಿಯೊಬ್ಬಳ ಕಥೆಯೇ ಬೇರೆ. ಹೌದು ತಾನೇ ಸಾಕಿ ಸಲುಹಿದ ತನ್ನ ಹೆತ್ತ ಕಂದನನ್ನೇ ಕೆರೆಗೆ ಎಸೆದು ಸಾಯಿಸಲು ಹೋಗಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ನಗರದ ಕಣಬರ್ಗಿಯಲ್ಲಿ ನಡೆದಿದೆ.

  ಹೌದು 35 ವರ್ಷದ ಶಾಂತಾ ಕರವಿನಕೊಪ್ಪಿ ಎಂಬ ಕ್ರೂರ ತಾಯಿ ತನ್ನ 2 ತಿಂಗಳ ಗಂಡು ಮಗುವನ್ನು ಕಣಬರಗಿ ಕೆರೆಯಲ್ಲಿ ಎಸೆದಿದ್ದಾಳೆ. ಮನೆಯಲ್ಲಿ  ಯಾರು ಇಲ್ಲದ ಸಮಯ  ಸದುಪಯೋಗ ಮಾಡಿಕೊಂಡ ಮಹಿಳೆ  ಮಗುವನ್ನು ಕನಬರಗಿಯ ಕೆರೆಯ ಕಡೆ ಕರೆದುಕೊಂಡು ಹೋಗಿ ಕೆರೆಗೆ ಎಸೆದು ಮಗುವನ್ನು ಕೊಲ್ಲಲು ಯತ್ನಿಸಿದ್ದಾಳೆ.

ಕೂಡಲೇ  ಎಚ್ಚೆತ್ತ ಸ್ಥಳೀಯರಿಂದ ಮಗುವನ್ನು ರಕ್ಷಿಸಿಸಲಾಗಿದ್ದು, ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಕ್ಷಣವೇ  ಮಹಿಳೆಯನ್ನು  ಬಂಧಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಕೆಯಲ್ಲಿ  ಮಹಿಳೆಯು  ಮಗುವಿಗೆ ಪಿಡ್ಸ್ ರೋಗ್ ಬರುತ್ತಿತ್ತು ಆದರೆ ಚಿಕಿತ್ಸೆ  ಕೊಡಿಸಿದರು ಕೂಡ ವಾಸಿಯಾಗದ ಪಿಡ್ಸ್ ಕಾಯಿಲೆ ಹೀಗಾಗಿ ಮಗವನ್ನು ಕೆರೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ.