ರಾಜ್ಯ ಕಂಡ ಧೀಮಂತ ನಾಯಕ್ ಮಾಜಿ ಸಿಎಂ S M ಕೃಷ್ಣ ವಿಧಿವಶ.

ಮಾಜಿ ಸಿಎಂ S M ಕೃಷ್ಣ

ಬೆಂಗಳೂರು ಡಿ. 10: ರಾಜ್ಯ ಕಂಡ ಧೀಮಂತ ನಾಯಕ  ಮಾಜಿ ಮುಖ್ಯಮಂತ್ರಿ  ಹಾಗೂ ವಿದೇಶಾಂಗ ಸಚಿವ  ಎಸ್ ಎಂ ಕೃಷ್ಣ  ವಿಧಿವಶರಾಗಿದ್ದಾರೆ. ಎಸ್ಎಮ್ ಕೃಷ್ಣ ಅವರ ಪೂರ್ಣ ಹೆಸರು  ಸೋಮನಹಳ್ಳಿ  ಮಲ್ಲಯ್ಯ ಕೃಷ್ಣ. ಇವರು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ 1932 ಮೇ 1ರಂದು ಜನಸಿದರು.

S M ಕೃಷ್ಣ ಅವರು ಬೆಂಗಳೂರಿನ್ ಸದಾಶಿವ ನಗರದಲ್ಲಿ ಇರುವ ಅವರ ನಿವಾಸದಲ್ಲಿ ವಯೋಸಹಜ್ ಕಾಯಿಲೆ ಇಂದ 92 ನೆ ವಯಸ್ಸಿನಲ್ಲಿ ಇಂದು ನಸುಕಿನ್ ಜಾವ ವಿಧಿವಶರಾದರು.

S M ಕೃಷ್ಣ ಅವರು ಕಾಂಗ್ರೆಸ್ ಪಕ್ಷದಲ್ಲಿ ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಇವರು ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ 1999 ರಿಂದ 2004 ರವರಿಗೆ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ರಾಜ್ಯವನ್ನು ಮುನ್ನಡೆಸಿದ್ದರು.

ಇವರು ವಿದೇಶಾಂಗ ಸಚಿವರಾಗಿ ಹಾಗೂ ಮಹಾರಾಷ್ಟದ ರಾಜ್ಯ ಪಾಲರಾಗಿ ಕೂಡ ಸೇವೆ ಸಲ್ಲಿದರು. ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ತಿಯಾಗಿ 1992 ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸುವ ಮೂಲಕ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಕೊನೆಗೆ ತಮ್ಮ್ ಇಳಿವಯಸ್ಸಿನಲ್ಲಿ ರಾಜಕೀಯ ತಿರುವುಗಳಿಂದ  ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.