ಬೆಳಗಾವಿ : ಇನ್ಸೂರೆನ್ಸ್  ಹಣಕ್ಕಾಗಿ  ಸ್ವಂತ ಅಣ್ಣನನ್ನೇ ಕೊಲೆ ಮಾಡಿದ ತಮ್ಮ.

ಬೆಳಗಾವಿ ಡಿ. 04:  “ ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು”.  ಎಂಬ ಗಾದೆ ಮಾತು  ನಮಗೆಲ್ಲರಿಗೂ  ಗೊತ್ತಿರುವುದೇ.  ಹೌದು ದುಡ್ಡಿನ ದುರಾಸೆಗಾಗಿ ಸ್ನೇಹಿತರಿಗೆ ಸುಪಾರಿ ಕೊಟ್ಟು ಒಡಹುಟ್ಟಿದ ಅಣ್ಣನಿಗೆ  ಮುಹೂರ್ತ ಇಟ್ಟ ತಮ್ಮ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಸ್ವಂತ್ ಅಣ್ಣನನ್ನೇ ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದ ದುರ್ದೈವಿ ಹನಮಂತ ತಳವಾರ್

ಅಣ್ಣ ಹಣಮಂತ ತಳವಾರನ್ ಹೆಸರಿನಲ್ಲಿ ಕೆಲ್ ದಿನಗಳ ಹಿಂದೆ 50 ಲಕ್ಷ ರೂಪಾಯಿ ವಿಮೆ ಮಾಡಿಸಿದ ತಮ್ಮಾ ಬಸವರಾಜ್ ದುಡ್ಡಿನ ದುರಾಸೆಗಾಗಿ ಸ್ನೇಹಿತರೊಡನೆ ಸೇರಿಕೊಂಡು ಅಣ್ಣನನ್ನೇ ಕೊಲೆ ಮಾಡುವ ವ್ಯವಸ್ಥಿತ ಸಂಚುರೂಪಿಸಿ, ಕೊನೆಗೆ ಕೊಲೆ ಮಾಡಿ ಶವವನನ್ನು ಎಸೆದಿರುತ್ತಾರೆ.  ಹಣಮಂತನ  ಶವ ಎಸೆದ  ಪ್ರದೇಶದಲ್ಲಿ ಮೊಬೈಲ್ ಟವರ್ ಲೊಕೇಷನ್ ಮೂಲಕ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ  ಯಶಸ್ವಿಯಾದ  ಘಟಪ್ರಭಾ  ಪೊಲೀಸರು.

ಬಂಧಿತ್ ಆರೋಪಿಗಳು

ಇನ್ನು  ಹನುಮಂತ ಕೊಲೆಗೆ ತಮ್ಮ್ ಬಸವರಾಜ್ ತಳವಾರ್ ಹಾಗೂ ಆತನ ಸ್ನೇಹಿತರಾದ ಬಾಪು ಶೇಖ, ಈರಪ್ಪ, ಸಚೀನ್ ಬಂಧಿತ್ ಆರೋಪಿಗಳು.