ಬಸ್ ಹತ್ತಲು ಹೋಗಿ ಬಸ್ ಚಕ್ರಕ್ಕೆ ಸಿಲುಕಿ ವಿಧ್ಯಾರ್ಥಿ ಸಾವು

ಮೃತ ರಾಘವೇಂದ್ರ

ಗದಗ.ನ.12: ಕಾಲೇಜಿಗೆ ತೇರಳಲು ಮನೆಯಿಂದ ಬಂದ ಯುವಕ ಬಸ್ ಚಕ್ರದಲ್ಲಿ ಸಿಲುಕಿ ಸಾವು. ಗದಗ್ ಜಿಲ್ಲೆ ಯ ನರಗುಂದ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ನಡೆದ ದುರ್ಘಟನೆ ಇದಾಗಿದ್ದು ಕಾಲೇಜಿಗೆಂದು ತೆರಳಲು ಕೊಣ್ಣೂರಿನ ಬಸ್ ನಿಲ್ದಾಣಕ್ಕೆ ಆಗಮಿಸಿದ  ರಾಘವೇಂದ್ರ.

ಬಸ್ ನ ಮುಂಭಾಗದ ಬಾಗಿಲಿನಿಂದ ಹತ್ತುವಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದರಿಂದ ಬಸ್ಸಿನ ಚಕ್ರ ನೇರವಾಗಿ ತಲೆಯ ಮೇಲೆ ಹಾಯ್ದು ಸ್ಥಳದಲ್ಲೇ ಸಾವನ್ನಪ್ಪಿದ ಯುವಕ.

ಮೃತ ಯುವಕ ಕೊಣ್ಣೂರಿನಿಂದ ನರಗುಂದ್ ಪಟ್ಟಣಕ್ಕೆ ಕಾಲೇಜಿಗೆ  ತೆರಳುವ ವೇಳೆ ನಡೆದ ದುರ್ಘಟನೆ. ಮೃತ ರಾಘವೇಂದ್ರ ನರಗುಂದನಲ್ಲಿ ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ.

ಮೃತ ಯುವಕನನ್ನು ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ರಾಘವೇಂದ್ರ ಫಕೀರಪ್ಪ ಮಣಿಕಟ್ಟಿ(21) ಯುವಕ ಎಂದು ತಿಳಿದು ಬಂದಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ನರಗುಂದ ಪೊಲೀಸರು ಆಗಮಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.