2015 ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜಿಲ್ಲಾ ಪೋಕ್ಸೋ ನ್ಯಾಯಾಲಯವು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರು ಜನ ಆರೋಪಿತರಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ನೀಡಿ ಇಂದು ನ್ಯಾಯಾಲಯ ಮಹತ್ವದ ತೀರ್ಪನ್ನು ಆದೇಶಿಸಿದೆ.
ಏನಿದು ಪ್ರಕರಣ?
ಬೆಳಗಾವಿ ಸೆ.19: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ದಿ. 21.06.2015 ರಂದು ಈ ಪ್ರಕರಣದ ನಂ 1 ಆರೋಪಿತನಾದ ನಸಲಾಪೂರ ಗ್ರಾಮದ ಸಚೀನ ರಾಯಮಾನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಗನಬಾವಡಾ ತಾಲೂಕಿನ ನಿಗದಿವಾಡಿ ವೇಶ್ರಾಪ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ಒಬ್ಬರಿಗೆ ಕೆಲಸಕ್ಕಾಗಿ ಬಂದಿರುತ್ತೇವೆ ಎಂದು ಸುಳ್ಳು ಹೇಳಿ ಅವರ ಮನೆಯ ಶೆಡ್ ಒಂದರಲ್ಲಿ ಅಪ್ರಾಪ್ತೆಯನ್ನು ಕೂಡಿಹಾಕಿ ಲೈಂಗಿಕ ಸಂಭೋಗ ಮಾಡಿದ್ದಲ್ಲದೆ. ಬಾಲಕಿಯನ್ನು ಕೈಯಿಂದ ಹೊಡಿ ಬಡಿ ಮಾಡಿರುತ್ತಾನೆ.
ಮತ್ತು ಬಾಲಕಿಯು ಮನೆಯಿಂದ ಹೊರಬರದಂತೆ ಪ್ರಕರಣದ ನಂ 2 ಆರೋಪಿ ಹಾಗೂ ನಂ 4 ಆರೋಪಿ ನಂ 1 ಆರೋಪಿಯ ಅಕ್ಕ- ಅಣ್ಣ ತಾಯಿ ಪ್ರಚೋದನೆ ಮಾಡಿ ಬಂಧನ ಮಾಡಿ ಕೂಡಿಹಾಕಿದ್ದಲ್ಲದೇ. ಅಪ್ರಾಪ್ತ ಬಾಲಕಿ ಮನೆಗೆ ತೆರಳಿ ಪ್ರಕರಣದ ನಂ 5 ಮತ್ತು 6 ನೇ ಆರೋಪಿಗಳು ಬಾಲಕಿಯನ್ನು ಹಿಂತಿರುಗಿ ಕರೆದುಕೊಂಡು ಬರಲು ಬಾಲಕಿಯ ತಂದೆಗೆ ಮೂರು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿಯಾದ ಶ್ರೀ ಎಂ ಎಸ್ ನಾಯಕರ ಚಿಕ್ಕೋಡಿ ಅವರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ 01 ಬೆಳಗಾವಿ ನ್ಯಾಯಲಕ್ಕೆ ದೋಷಾರೋಪನೆ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪಿತರ ವಿರುದ್ಧ ಒಟ್ಟು 16 ಸಾಕ್ಷಿಗಳ ವಿಚಾರಣೆ ಮೇಲಿಂದ 28 ದಾಖಲೆಗಳು ಸಾಬೀತಾಗಿದ್ದು ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಸಿಎಂ ಪುಷ್ಪಲತಾ ಇವರು ಈ ಪ್ರಕರಣದ ಕುರಿತು ವಿಚಾರಣೆ ಮಾಡಿ ಆರೋಪಿತರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಪ್ರತಿಯೊಬ್ಬ ಆರೋಪಿತರಿಗೆ ತಲಾ 10, 000ರೂ ದಂಡ ಹಾಗೂ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕರಣ ಆದೇಶ ಆಗಿರುತ್ತದೆ.
ಇನ್ನು ಈ ಪ್ರಕರಣದಲ್ಲಿ ಸರಕಾರದ ಪರ ಶ್ರೀ ಎಲ್ ವಿ ಪಾಟೀಲ್ ವಿಶೇಷ ಸರಕಾರಿ ಅಭಿಯೋಜಕರು ಪ್ರಕರಣದ ಕುರಿತು ವಾದ ಮಂಡಿಸಿರುತ್ತಾರೆ.
ಕಠಿಣ ಶಿಕ್ಷೆಗೆ ಗುರಿಯಾದ ಆರೋಪಿತರು.
ನಂ 1 ಆರೋಪಿ ರಾಯಬಾಗ್ ತಾಲೂಕಿನ ನಸಲಾಪುರ ಗ್ರಾಮದ ಸಚಿನ್ ಬಾಬಾಸಾಹೇಬ್ ರಾಯಮಾನೆ.
ನಂ 2 ಆರೋಪಿ ರೂಪಾ ಬಾಬಾಸಾಹೇಬ್ ರಾಯಮಾನೆ
ನಂ 3 ಆರೋಪಿ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ ರೋಹಿಣಿ ಶ್ರೀಮಂತ್ ದೀಕ್ಷಿತ್
ನಂ 4 ಆರೋಪಿ ರಾಕೇಶ್ ಬಾಬಾಸಾಹೇಬ್ ರಾಯಮಾನೆ
ನಂ 5 ಆರೋಪಿ ವಿನೋದ್ ಸುರೇಶ್ ರಾಯಮಾನೆ
ನಂ 6 ಆರೋಪಿ ಮಹಾರಾಷ್ಟ್ರದ ಮಿರಜ್ ತಾಲೂಕಿನ ಕುಪ್ಪವಾಡ ಗ್ರಾಮದ ವಿಜಯ ತಾನಾಜಿ ಸಾಳುಂಕೆ