ಬೆಳಗಾವಿ ಸೆ.5: ಗೋಕಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಗೋಕಾಕ್ ಪೊಲೀಸರು. ಹೌದು ಗೋಕಾಕ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಬೈಕ್ ಹಾಗೂ ನಗರದ ಸೋಮವಾರ ಪೇಟೆಯ ಮನೆ ಮುಂದೆ ನಿಲ್ಲಿಸಿದ ಟಿವಿಎಸ್ ಸ್ಕೂಟಿ ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಕಳ್ಳತನ ಮಾಡಿದ ಬೈಕ್ ಗಳ ಸಮೇತ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಗೋಕಾಕ ಶಹರ ಠಾಣೆಯ ಪೊಲೀಸರು.
ಗೋಕಾಕ ನಗರದ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನವಾದ ದೂರು ದಾಖಲಾಗುತ್ತಿದ್ದಂತೆ ನಗರ ಪೊಲೀಸ್ ಇಲಾಖೆ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ತನಿಖೆ ಸಮಯದಲ್ಲಿ ತುಕ್ಕಾನಟ್ಟಿ ಗ್ರಾಮದ ಆರೋಪಿತನಾದ ಸಂತೋಷ್ ಗೂಳಪ್ಪ ಪಾಟೀಲ್ ಹಾಗೂ ದೇವಪುರಹಟ್ಟಿ ಗ್ರಾಮದ ಆರೋಪಿತ ನಿಂಗಪ್ಪ ಉದ್ದಪ್ಪ ಪಿಡಾಯಿ ಎಂಬುವರನ್ನು ಪತ್ತೆ ಹಚ್ಚಿದ ಪೊಲೀಸರು ಇವರ ಅದಿನದಲ್ಲಿದ ಸುಮಾರು 5,00,000/ ರೂ ಬೆಲೆ ಬಾಳುವ ಕಳ್ಳತನ ಮಾಡಿದ ವಿವಿಧ ಕಂಪನಿಗಳ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಈ ತನಿಖೆಯ ಕಾರ್ಯಾಚರಣೆಯು ಬೆಳಗಾವಿ ಜಿಲ್ಲಾ ಪೋಲಿಸ್ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಗೋಕಾಕ ಡಿಎಸ್ ಪಿ ಶ್ರೀ ಡಿ ಎಚ್ ಮುಲ್ಲಾ ಗೋಕಾಕ ಸಿಪಿಐ ಶ್ರೀ ಗೋಪಾಲ ಆರ್ ರಾಠೋಡ, ಮತ್ತು ಗೋಕಾಕ ಶಹರ ಪೋಲಿಸ್ ಠಾಣೆಯ ಪಿಎಸ್ಐ ಶ್ರೀ ಕೆ ಬಿ ವಾಲಿಕಾರ ಹಾಗೂ ಸಿಬ್ಬಂದಿಗಳಾದ ಕೆ ಆರ್ ಹಕ್ಯಾಗೋಳ, ವಿಠ್ಠಲ ನಾಯಿಕ, ಶಹಜಹಾನ್ ತೋರಗಲ್, ಎ ಎಸ್ ಕಾಪಸಿ ಎನ್ ಬಿ ಬೆಳಗಲಿ ಇತರರು ಪಾಲ್ಗೊಂಡಿದ್ದರು.
ಈ ಬೈಕ್ ಕಳ್ಳರ ಪತ್ತೆ ಹಚ್ಚಿದ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಭೀಮಾಶಂಕರ ಗುಳೇದ ಐಪಿಎಸ್, ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕು.ಶೃತಿ ಎಚ್ ಎಸ್ ಮತ್ತು ಶ್ರೀ ಆರ್ ಬಿ ಬಸರಗಿ ಪ್ರಶಂಸಿದ್ದಾರೆ.