ಕಳೆದ ಮೂರು ತಿಂಗಳುಗಳಿಂದ ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಸಾವಿರಾರು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈಗಾಗಲೇ ನಟ ದರ್ಶನ್ ಹಾಗೂ ತಂಡ ಕೊಲೆ ಆರೋಪದಲ್ಲಿ ಈಗಾಗಲೇ ಜೈಲಿನ ಸೆರೆವಾಸ ಅನುಭವಿಸುತ್ತಿದ್ದಾರೆ.
ನಟ ದರ್ಶನ್ ಗೆಳತಿ ಪವಿತ್ರ ಗೌಡಗೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯಿಂದ ಅಶ್ಲೀಲ ಮೆಸೇಜ್ ಮಾಡಿದ ಕುರಿತು ಆತನನ್ನು ಪಟ್ಟಣಗೆರೆ ಶೆಡ್ ಒಂದರಲ್ಲಿ ಕೂಡಿಹಾಕಿ ದರ್ಶನ ಹಾಗೂ ತಂಡದಿಂದ ವಿಪರಿತ ಚಿತ್ರ ಹಿಂಸೆ ನೀಡಿದ್ದರಿಂದ ರೇಣುಕಾ ಸ್ವಾಮಿ ಮೃತಪಟ್ಟಿದಾನೆಂಬ ಆರೋಪ ವರದಿಯಾಗಿದೆ.
ಅದೇ ರೀತಿ ರೇಣುಕಾ ಸ್ವಾಮಿ ಅಂಗಲಾಚಿರುವ ಪೋಟೋ ಹಾಗೂ ಶವವಾಗಿ ಬಿದ್ದ ಫೊಟೋಗಳು ಆರೋಪಿಗಳ ಮೊಬೈಲ್ ನಲ್ಲಿ ಸೆರೆಹಿಡಿದು ಆಮೇಲೆ ಡಿಲಿಟ್ ಮಾಡಲಾಗಿತ್ತು. ಆದರೆ ಇದೀಗ ಫೋಟೋಗಳನ್ನು ರಿಟ್ರೀವ ಮಾಡಿ ಚಾರ್ಜ್ ಶೀಟ್ ನಲ್ಲಿ ಲಗತ್ತಿಸಲಾಗಿದೆ.
ಏನೆ ಆಗಲಿ ದರ್ಶನ ಇಂತಹ ಕಠೋರ ನಿರ್ಧಾರವನ್ನು ತೆಗೆದುಕೊಳ್ಳದೆ ಕಾನೂನಾತ್ಮಕವಾಗಿ ರೇಣುಕಾ ಸ್ವಾಮಿ ವಿರುದ್ಧ ಕ್ರಮವನ್ನು ಕೈಗೊಂಡಿದ್ದರೆ ಇಂದು ಸೆರೆವಾಸ ಅನುಭವಿಸುವ ದಿನಗಳನ್ನು ತಪ್ಪಿಸಬಹುದಿತ್ತು.