ಬೆಳಗಾವಿ: ರಥೋತ್ಸವದ ವೇಳೆ ದುರಂತ;  ರಥದ ಮೇಲಿದ್ದ ಕಳಸ ಬಿದ್ದು ಬಾಲಕ ಸಾವು.

ಭಗವಂತ ಕೊಟ್ಟ ಭಿಕ್ಷೆ ಈ ಜೀವ! ಹಾಗೆ ಕೊಟ್ಟು ಜೀವವನ್ನು ಯಾವುದಾದರೂ ಒಂದು ನೆಪ ಹೇಳಿ ಮರಳಿ ಸಾವಿನ ರೂಪದಲ್ಲಿ ಕರೆದೊಯ್ಯುತ್ತಾನೆ. ಮಾನವನ ಸಾವು ಆಕಸ್ಮಿಕದಿಂದಾಗಲಿ, ಅಪಘಾತಗಳಿಂದಾಗಲಿ,  ಆನಾರೋಗ್ಯದಿಂದಾಗಬಹುದು ಹಲವಾರು ಕಾರಣಾಂತರಗಳಿಂದ  ಮನುಷ್ಯನಿಗೆ ಸಾವು ಸಂಭವಿಸುತ್ತದೆ. ಆದರೆ ಇದುವರೆಗೂ ಯಾವೊಬ್ಬ ವ್ಯಕ್ತಿಗೂ ತನ್ನ ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂಬುದು ಮಾತ್ರ ತಿಳಿದಿಲ್ಲ.

ಬೆಳಗಾವಿ ಆ.26: ಹೌದು  ಆಕಸ್ಮಿಕವಾಗಿ ಸಂಭವಿಸಿದ ಅನಾಹುತ ಒಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ. ಶ್ರಾವಣ ಮಾಸದ ನಿಮಿತ್ಯ ಊರಲ್ಲಿರುವ ಸಂಗಮೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ರಥೋತ್ಸವದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅನಾಹುತಕ್ಕೆ ಒಬ್ಬ ಬಾಲಕ ಸಾವಿಗಿಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ರಥೋತ್ಸವದ ವೇಳೆ ಸಂಭವಿಸಿದ ಘಟನೆಯ ವಿಡಿಯೋ 👇

https://youtube.com/shorts/hjCY2jmINYw?si=j241MablvKe4-ycf

ಜಾತ್ರೆಯ ನಿಮಿತ್ಯ ಊರಲ್ಲಿರುವ ಯುವಕರೆಲ್ಲರೂ ಸೇರಿ ಈ ಬಾರಿ ರಥೋತ್ಸವಕ್ಕೆ ರಥದ ಮೇಲೆ 5 ಕೆಜಿ ಬೆಳ್ಳಿಯ ನವಿಲು ಪ್ರತಿಷ್ಠಾಪಿಸಿದ್ದರು. ಆದರೆ ರಥೋತ್ಸವದ ವೇಳೆ ಪ್ರತಿಷ್ಠಾಪಿಸಿದ ಬೆಳ್ಳಿಯ ನವಿಲು ಮೇಲಿನಿಂದ ಕೆಳಗೆ ಇದ್ದ ಬಾಲಕನ ತಲೆಯ ಮೇಲೆ ಬಿದ್ದಿದ್ದು. ನೇರವಾಗಿ ಬಾಲಕನ ತಲೆಗೆ ಬಿದ್ದಿದ್ದರಿಂದ ಬಾಲಕ ಸಾವನಪ್ಪಿದ್ದಾನೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಂಗಮೇಶ್ವರ ಜಾತ್ರೆಯು ಪ್ರತಿವರ್ಷ ವಿಜೃಂಭಣೆಯಿಂದ  ನಡೆಯುತ್ತಿತ್ತು ಆದರೆ ಈ ವರ್ಷ ಏನಾದರೂ ಒಂದು ಹೊಸದಾಗಿ ಮಾಡಬೇಕೆಂದು ಯೋಚಿಸಿದ ಯುವಕರಿಗೆ ಆಘಾತ ಕಾದಿತ್ತು.  ಗ್ರಾಮದ ರಸ್ತೆ ತೆಗ್ಗು ಗುಂಡಿಗಳಿಂದ ಕೂಡಿದ್ದರಿಂದ ರಥೋತ್ಸವ ವೇಳೆ ರಥದ ಚಕ್ರವು ತೆಗ್ಗಿನಲ್ಲಿ ಸಿಲುಕಿಕೊಂಡಿತ್ತು ಹೀಗಾಗಿ ರಥವನ್ನು ಜೋರಾಗಿ ಎಳೆದಿದ್ದರಿಂದ ಮೇಲೆ ಇದ್ದ ಬೆಳ್ಳಿಯ ನವಿಲು ಅಲುಗಾಡಿ ರಥದ ಮೇಲಿಂದ ಕಿತ್ತು ಕೆಳಗಿದ್ದ ಬಾಲಕನ ತಲೆಯ ಮೇಲೆ ಬಿದ್ದಿದೆ.

ಇನ್ನು ಮೃತ ದುರ್ದೈವಿ 13 ವರ್ಷದ ಬಾಲಕನಾಗಿದ್ದು ಶಿವಾನಂದ್ ರಾಜಕುಮಾರ್ ಸಾವಳಗಿ ಎಂದು ತಿಳಿದುಬಂದಿದೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ದುರ್ಘಟನೆ ನಡೆದ ಮೇಲೆ ರಥೋತ್ಸವ ಮೊಟ್ಟಕು ಗೊಂಡಿದೆ.

ಘಟನೆ ನಂತರ ಟ್ರ್ಯಾಕ್ಟರ್ ಮೂಲಕ ಎಳೆದರೂ ಮುಂದಕ್ಕೆ ಹೋಗದ ರಥ!

ಎಷ್ಟೇ ಜನ ಕೂಡಿ ರಥವನ್ನು ಎಳೆದರು ಮುಂದಕ್ಕೆ ಸಾಗದ ರಥ.  ಊರಿನ ಗ್ರಾಮಸ್ಥರಲ್ಲಿ ಹಲವು ಪ್ರಶ್ನೆ ಮೂಡಿದೆ. ರಥೋತ್ಸವದ ವೇಳೆ ನಡೆದ  ದುರ್ಘಟನೆಯ ನಂತರ ರಥವನ್ನು ಎಷ್ಟೇ ಜೋರಾಗಿ ಹೇಳಿದರೂ ಕೂಡ ಮುಂದಕ್ಕೆ ಹೋಗದೆ ರಥ ಅಲ್ಲೇ ನಿಂತಿತ್ತು. ಎಷ್ಟೇ ಪ್ರಯತ್ನ ಪಟ್ಟರು ಮುಂದುಗಡೆ ಹೋಗದ ರಥವನ್ನು ಟ್ರ್ಯಾಕ್ಟರ್ ಮೂಲಕ ಎಳೆಯಲು ಪ್ರಯತ್ನ ಪಟ್ಟರು ಕೂಡ ಮುಂದಕ್ಕೆ ಹೋಗಲಿಲ್ಲ.

ಕೊನೆಗೆ ಮುಂದಕ್ಕೆ ಸಾಗದ ರಥವನ್ನು ಹಿಂದಿರುಗಿ ಎಳೆದಾಗ ಸರಿಸಾಗಿ ವಾಪಸ್ ಮೂಲ ಸ್ಥಳಕ್ಕೆ ಹಿಂದಿರುಗಿತು. ಇದರಿಂದ ಈ ಬಾರಿ ರಥೋತ್ಸವ ಅರ್ಧಕ್ಕೆ ನಿಲ್ಲಿಸಲಾಯಿತು.