ರಾಜ್ಯದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ರಾಜ್ಯದ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಕುಟುಂಬದ ಯಜಮಾನಿಯರಿಗೆ 2,000 ರೂ. ಪ್ರತಿ ತಿಂಗಳು ಕೊಡುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ತಲಾ 2,000 ರೂ. ಹಣವನ್ನು ನೀಡುತ್ತಾ ಬಂದಿದ್ದು. ಇದೀಗ ಸಿದ್ದರಾಮಯ್ಯನವರು ರಾಜಕೀಯವಾಗಿ ಇನ್ನು ಎತ್ತರಕ್ಕೆ ಬೆಳೆಯಲಿ ಹಾಗೂ ಯಾವುದೇ ಅಡೆತಡೆಗಳು ಬರದೆ ಸದಾ ಕಾಲ ಅಧಿಕಾರದಲ್ಲಿರಬೇಕೆಂದು ಊರಿನ ಗ್ರಾಮದೇವತೆಗೆ ಪೂಜಿ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ ಹಾಗೂ ಗ್ರಾಮದ ಮಹಿಳೆಯರು.
ಬೆಳಗಾವಿ ಆ.25: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗಾಗಿ ನೀಡುತ್ತಿರುವ ಗ್ರಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಕೆಲ ಹೆಣ್ಣು ಮಕ್ಕಳು ಟಿವಿ, ಫ್ರಿಡ್ಜ್, ಹಾಗೂ ಬಂಗಾರ ಹೀಗೆ ವಸ್ತುಗಳನ್ನು ಖರೀದಿ ಮಾಡಿದರೆ ಇಲ್ಲೋಬ್ಬ ಅಜ್ಜಿ ಸಿದ್ದರಾಮಯ್ಯನವರು ರಾಜಕೀಯವಾಗಿ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಊರಿನ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಮಾಡಿಸಿದ್ದಾಳೆ. ಹೌದು ಇದು ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ.
ಸುಟ್ಟಟ್ಟಿ ಗ್ರಾಮದ ಅಕ್ಕತಾಯಿ ಲಂಗೋಟಿ ಎಂಬ ವೃದ್ಧ ಮಹಿಳೆ ತನಗೆ ಬಂದಂತಹ 10 ಖಂತಿನ ಹಣದಿಂದ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ್ದಾರೆ. ಮೊದಲಿಗೆ ಐದು ಜನ ಮುತ್ತೈದೆಯರಿಗೆ ಉಡಿ ತುಂಬಿ. ದೇವರಿಗೆ ಪೂಜಿ ಸಲ್ಲಿಸಿ ಊರಿನ ಜನರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಅಜ್ಜಿಯ ಈ ಕಾರ್ಯಕ್ಕೆ ಗ್ರಾಮದ ಮಹಿಳೆಯರು ಕೂಡ ಅಜ್ಜಿಯ ಜೊತೆಗೆ ಸಾತ್ ನೀಡಿದ್ದಾರೆ.
ಅದೇ ರೀತಿ ದುಂಡವ್ವ ನೂಲಿ, ಹಾಗೂ ಲಕ್ಕವ್ವ ಹಟ್ಟಿಮನಿ ಹಾಗೂ ಗ್ರಾಮದ ಇನ್ನುಳಿದ ವೃದ್ಧ ಮಹಿಳೆಯರು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದರು ಹಾಗೂ ಸಿದ್ದರಾಮಯ್ಯನವರು ಈ ಯೋಜನೆಯನ್ನು ಅರ್ಧಕ್ಕೆ ಕೈಬಿಡದೆ ಪ್ರತಿ ತಿಂಗಳು ಹಣ ಕೊಡಬೇಕೆಂದು ಹೇಳಿದರು ಇದರಿಂದ ಬಡವರಿಗೆ ಹಾಗೂ ವೃದ್ಧ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಸಿದ್ದರಾಮಯ್ಯನವರಿಗೆ ಆಶೀರ್ವದಿಸಿದರು ಮಹಿಳೆಯರಿಗೆ ಕಾರ್ಯಕ್ಕೆ ಸುಟ್ಟಟ್ಟಿ ಗ್ರಾಮದ ಜನ ಕೈಜೋಡಿಸಿದ್ದರು.