“ ಆನ್ಲೈನ್ ಗೇಮ್ ” ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಂತೂ ಆನ್ಲೈನ್ ಗೇಮ್ ಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಕೆಲ ಜನರು ಕಷ್ಟಪಟ್ಟು ದುಡಿಯುವುದನ್ನು ಬಿಟ್ಟು ಅಡ್ಡ ದಾರಿಯನ್ನು ಹಿಡಿಯುತ್ತಿದ್ದಾರೆ. ಆನ್ಲೈನ್ ಗೇಮ್ ಗಳ ವ್ಯಾಮೋಹಕ್ಕೆ ಬಲಿಯಾಗಿ ಮೊಬೈಲ್ ಗಳಲ್ಲಿ ನೀಡುವ ಜಾಹೀರಾತುಗಳನ್ನು ನೋಡಿ ಲಕ್ಷ ಕೋಟಿ ಗೆಲ್ಲುವ ದುರಾಸೆಯೊಂದಿಗೆ ಆನ್ಲೈನ್ ಗೇಮ್ ಗಳ ಚಟಕ್ಕೆ ದಾಸರಾಗುತ್ತಿದ್ದಾರೆ. ಮೊದ ಮೊದಲಿಗೆ ಮೊಬೈಲ್ ಗಳಲ್ಲಿ ಕೇವಲ ಟೈಮ್ ಪಾಸ್ ಗಾಗಿ ಆಪ್ ಲೈನ್ ಗೇಮ್ ಗಳು ಇರುತ್ತಿದ್ದವು ಆದರೆ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಇತ್ತೀಚಿಗೆ ಆನ್ಲೈನ್ ಗೆಮ್ ಎಂಬ ಹುಚ್ಚು ಕೆಲವರನ್ನು ಅದರ ದಾಸರನಾಗಿಸಿ ಬಿಟ್ಟಿದೆ. ಆರಂಭದಲ್ಲಿ ದುಡ್ಡು ಗೆಲ್ಲುವ ಹುಮ್ಮಸ್ಸಿನಿಂದ ಪ್ರಾರಂಭಗೊಂಡು ಕೊನೆಗೆ ಇರೋ ಬರೋ ಆಸ್ತಿಯನ್ನು ಮಾರಿಕೊಂಡು ಲಕ್ಷ ಕೋಟಿ ಸಾಲ ಮಾಡುವ ಮಟ್ಟಿಗೆ ಆನ್ಲೈನ್ ಗೇಮ್ ಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಂತಹದೇ ಆನ್ಲೈನ್ ಗೇಮ್ ನಿಂದ ಸಾಲ ಮಾಡಿಕೊಂಡು ತೀರಿಸಲಾಗದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಅ.15: ಅದು ಗಂಡ ಹೆಂಡತಿ ಒಂದು ಪುಟ್ಟ ಮಗು ಇರುವ ಚಿಕ್ಕ ಸಂಸಾರ ಗಂಡ ಜೀವನ ನಡೆಸಲು ಎರಡು ಸ್ವಂತ ಕಾರುಗಳನ್ನು ಹೊಂದಿದ್ದ. ಜೊತೆಗೆ ಹೆಂಡತಿಯಾದವಳು ಗಂಡನಿಗೆ ಸಾತ್ ನೀಡಲು ಖಾಸಗಿ ಶಾಲೆ ಒಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಹೇಗೋ ಮೂವರ ಕುಟುಂಬ ನಡೆಸಲು ಎರಡು ಕಾರುಗಳ ಮಾಲೀಕನಾಗಿದ್ದ ಶ್ರೀನಿವಾಸ್ ಇರೋಕೆ ಸ್ವಂತ ಮನೆ ಕೂಡ ಇತ್ತು. ಆದರೆ ಆನ್ಲೈನ್ ಗೇಮ್ ಗಳ ದುಶ್ಚಟಕ್ಕೆ ಅಂಟಿಕೊಂಡು ಇರೋ ಬರೋ ಆಸ್ತಿಯನ್ನು ಮಾರಿ ಮೈ ತುಂಬ ಸಾಲ ಮಾಡಿಕೊಂಡು ಕೊನೆಗೆ ಸಾಲ ತೀರಿಸಲಾಗದೆ ಪತ್ನಿ ಹಾಗೂ ಇರೋ ಒಬ್ಬ ಪುಟ್ಟ ಮಗಳೊಂದಿಗೆ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ. ಯಜಮಾನ ಮಾಡಿದ ಯಡವಟ್ಟಿಗೆ 36 ವರ್ಷದ ಹೆಂಡತಿ ಹಾಗೂ ಇನ್ನೂ ಜಗತ್ತಿನ ಜ್ಞಾನವನ್ನೇ ಅರಿಯದ 13 ವರ್ಷದ ಅಪ್ರಾಪ್ತ ಮಗಳು ಕೂಡ ಸಾವನ್ನಪ್ಪಿದ ಅಹಿತಕರ ಘಟನೆ ನಡೆದಿರುವುದು ಹಾಸನ್ ಜಿಲ್ಲೆಯ ಚನ್ನರಾಯಪಟ್ಟಣ ನಗರದಲ್ಲಿ ನಡೆದಿದೆ.
ಇದುವರೆಗೂ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು ಸೆಟ್ಟಲ್ ಆಗಿದ್ದ ಶ್ರೀನಿವಾಸ ಒಳ್ಳೆಯ ಆದಾಯದೊಂದಿಗೆ ತನ್ನ ಕುಟುಂಬ ನಡೆಸುತ್ತಿದ್ದ ಆದರೆ ಆನ್ಲೈನ್ ರಮ್ಮಿ ಎಂಬ ಆಟದಲ್ಲಿ ಮೊದಲಿಗೆ ಸ್ವಲ್ಪಮಟ್ಟಿಗೆ ಹಣವನ್ನು ಗೆದ್ದಿರುತ್ತಾನೆ ಕೊನೆಗೆ ಕ್ರಮೇಣವಾಗಿ ಸೋಲುತ್ತಾ ತಮ್ಮಲ್ಲಿರುವ ಕಾರು ಹಾಗೂ ಮನೆ ಮಾರಿಕೊಂಡು ಬರಿಗೈಯಾಗಿದ್ದ ಶ್ರೀನಿವಾಸ್ ಪ್ರತಿನಿತ್ಯ ಕೆಲಸವನ್ನು ಮಾಡದೆ ಆನ್ಲೈನ್ ರಮ್ಯಾ ಆಡುವುದೇ ಆತನ ಮುಖ್ಯ ಉದ್ದೇಶವನ್ನಾಗಿ ಮಾಡಿಕೊಂಡಿದ್ದಾರೆ ಲಕ್ಷ ಕೋಟಿ ಗೆಲ್ಲುವ ದುರಾಸೆಯ ಜಾಹೀರಾತಿಗಳಿಗೆ ಮರುಳಾಗಿ ಇದ್ದಿದ್ದೆಲ್ಲವನ್ನು ಕಳೆದುಕೊಂಡು. ಸಾಲಗಾರನಾಗಿದ್ದ. ಇತ್ತ ಗಂಡನ ವ್ಯವಸ್ಥೆಯನ್ನು ನೋಡಿ ಹೆಂಡತಿ ಶ್ವೇತಾ ಚನ್ನರಾಯಪಟ್ಟಣದಲ್ಲಿರುವ ಖಾಸಗಿ ಶಾಲೆ ಒಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಂಡು ಸಾಲವನ್ನು ಸಾಗಿಸುತ್ತಿದ್ದರು ಆದರೆ ಅತಿಯಾದ ಸಾಲದಿಂದಾಗಿ ಅನೇಕ ಜನರ ಕಡೆಗೆ ಸಾಲವನ್ನು ಮಾಡಿಕೊಂಡಿದ್ದ ಶ್ರೀನಿವಾಸ ಸಾಲಗಾರರಿಂದ ತನ್ನ ವೈಯಕ್ತಿಕ ನೆಮ್ಮದಿಯನ್ನೇ ಕಳೆದುಕೊಂಡಿದ್ದರು. ಮಾಡಿದ ಸಾಲವನ್ನು ತೀರಿಸಲಾಗದೆ ಮಡದಿ ಹಾಗೂ ಮಗಳೊಂದಿಗೆ ಹೇಮಾವತಿ ಕಾಲುವೆಗೆ ಹಾರಿ ಪ್ರಾಣವನ್ನು ಕಳೆದುಕೊಂಡಿದ್ದೇನೆ.
ಶನಿವಾರದಿಂದ ಕಾಣೆಯಾಗಿದ್ದ ಶ್ರೀನಿವಾಸ ಮತ್ತು ಕುಟುಂಬ ಕಾಣುತ್ತಿಲ್ಲವೆಂದು ಮನೆಯವರು ಮಂಗಳವಾರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಆದರೆ ನಿನ್ನೆ ಅ.14 ರಂದು ಸಂಜೆ ನುಗ್ಗೆಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮುದ್ಲಾಪುರ ಹೇಮಾವತಿ ನಾಲೆಯಲ್ಲಿ ಶ್ರೀನಿವಾಸ ಮತ್ತು ಆತನ ಮಡದಿಯ ಶವ ಪತ್ತೆಯಾಗಿದ್ದು. ಪುತ್ರಿ ಶವ ಕೂಡ ಪತ್ತೆಯಾಗಿದೆ. ಒಟ್ಟಿನಲ್ಲಿ ಆನ್ಲೈನ್ ಗೇಮ್ ಗಳ ವ್ಯಾಮೋಹಕ್ಕೆ ಬಲಿಯಾಗಿ ಇರುವ ಚಾಲಕ ಹುದ್ದೆಯನ್ನು ಬಿಟ್ಟು ಲಕ್ಷ ರೂಪಾಯಿ ಗೆಲ್ಲುವ ದುರಾಸೆಗೆ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡು ಕೊನೆಗೆ ಸಾಲಗಾರನಾಗಿ ದಿಕ್ಕು ತೋಚದೆ ಸಾಲಗಾರರ ಕಿರುಕುಳದಿಂದ ಮಾನಸಿಕವಾಗಿ ಹೋಗಿ ಮಡದಿ ಹಾಗೂ ಮಗಳೊಂದಿಗೆ ಸಾವಿನಲ್ಲಿ ಅಂತ್ಯ ಕಂಡ ಶ್ರೀನಿವಾಸ್. ಹೀಗೆ ಆನ್ಲೈನ್ ಗೆಮಗಳ ಹಾವಳಿಗೆ ಕೆಲವು ಕುಟುಂಬಗಳು ಬೀದಿ ಪಾಲಾಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.