ಕುಕ್ಕರ್ ಸ್ಫೋಟ ಇಬ್ಬರಿಗೆ ಗಂಭೀರ ಗಾಯ: ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದಿದ್ದ ಕುಟುಂಬ.

ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ  ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದ  ಕುಟುಂಬ ಇಂದು ಬೆಳಿಗ್ಗೆ  ಹೋಳಿಗೆ ಮಾಡಲು ಕುಕ್ಕರ್ ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದು 2 ಸೀಟಿ ಹೊಡೆದ ನಂತರ ಕುಕ್ಕರ ಸ್ಫೋಟ ಗೊಂಡಿದೆ. ಕುಕ್ಕರ್ ಬ್ಲಾಸ್ಟ್ ಆಗಿದ್ದರಿಂದ ಇಬ್ಬರಿಗೆ ಗಂಭೀರ ಗಾಯವಾದ್ ಘಟನೆ ಸವದತ್ತಿಯ ರೇಣುಖಾ ಸಾಗರ ಲಾಡ್ಜ್ ನಲ್ಲಿ ನಡೆದಿದೆ.

ಬೆಳಗಾವಿ ಅ13: ಜಿಲ್ಲೆಯ ಸವದತ್ತಿ ತಾಲೂಕಿನ  ಜಗತ್ಪ್ರಸಿದ್ಧ ಆದಿಶಕ್ತಿ ಶ್ರೀ ರೇಣುಕಾ ಎಲ್ಲಮನ ದರ್ಶನಕ್ಕೆ ಕುಟುಂಬ ಸಮೇತರಾಗಿ ಬಂದಿದ್ದ ಬೆಂಗಳೂರು ಮೂಲದ 5 ಜನ ಹಾಗೂ ಯಾದಗಿರಿ ಜಿಲ್ಲೆಯಿಂದ ಬಂದಿದ್ದ ಮೂವರೂ ಭಕ್ತರು ಎಲ್ಲಮನ್ ಗುಡ್ಡದ ರೇಣುಕಾ ಸಾಗರ್ ಎಂಬ ಲಾಡ್ಜ್ ಒಂದರಲ್ಲಿ ತಂಗಿದ್ದರು. ಬೆಳಿಗ್ಗೆ ಎದ್ದು ದೇವಿಯ ಪ್ರಸಾದಕೆಂದು ಹೋಳಿಗೆ ಮಾಡಲು ಕುಕ್ಕರಲ್ಲಿ ಬೆಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ ಕುಟುಂಬ ಕೆಲವು ನಿಮಿಷಗಳ ನಂತರ 2 ಸೀಟಿ ಆದ ತಕ್ಷಣ್ ಏಕಾಏಕಿ  ಕುಕ್ಕರ್ ಬ್ಲಾಷ್ಟ ಆಗಿದೆ. ಬ್ಲಾಸ್ಟ್ ಆದ್ ರಬಸಕ್ಕೆ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಇದರಿಂದ ಸ್ಥಳದಲ್ಲಿದ 2 ಇಬ್ಬರಿಗೆ ಗಂಭೀರ ಗಾಯಗೊಂಡಿದ್ದು ಉಳಿದ 6 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಕುಕ್ಕರ್ ಸ್ಫೋಟದಿಂದ  ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು. ಚಿಕ್ಕ ಪುಟ್ಟ ಗಾಯಗಳಾಗಿದ್ದ 6 ಜನರನ್ನು  ಸ್ಥಳೀಯ   ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.  ಕೂಡಲೇ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.