ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಸಪ್ತ ನದಿಗಳು ಅಪಾಯ ಮಟ್ಟ್ ಮೀರಿ ಹರಿಯುತ್ತಿರುವರ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಈಗಾಗಲೇ ಚಿಕ್ಕೋಡಿ ಭಾಗದ ಕೆಲ ಸಂಪರ್ಕ ಸೇತುವೆಗಳು ಜಲಾವೃತಗೊಂಡು ಸಾರ್ವಜನಿಕ ಸಂಪರ್ಕ ಕಡಿತ ಕೊಂಡಿದೆ. ಈಗಾಗಲೇ ಹಿಡಕಲ್ ಜಲಾಶಯದಿಂದ 10,000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದ್ದು ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಬೆಳಗಾವಿ: ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಗೋಕಾಕ್ ಹಾಗೂ ಮೂಡಲಗಿ ತಾಲೂಕಿನ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ ಗೋಕಾಕ್ ನಗರದ ಹಳೆಯ ದನದ ಪೇಟೆಯಲ್ಲಿ ಜಲಾವೃತಗೊಂಡಿದ್ದು ಮನೆ ಹಾಗೂ ಷಡ್ಗಳಲ್ಲಿ ನೀರು ನುಗ್ಗಿದೆ, ಅದೇ ರೀತಿ ದೂದ ಗಂಗಾ ವೇದ ಗಂಗಾ ನದಿಯ ಅಬ್ಬರಕ್ಕೆ ಚಿಕ್ಕೋಡಿಯ ಉಪವಿಭಾಗದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಸದ್ಯ 87 ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ. ಇನ್ನೂ ಬೆಳಗಾವಿ ವ್ಯಾಪ್ತಿಯಲ್ಲಿ 35 ಗ್ರಾಮಗಳಲ್ಲಿ ಆತಂಕ ಶುರುವಾಗಿದ್ದು ಒಟ್ಟು ಬೆಳಗಾವಿ ಜಿಲ್ಲಾದ್ಯಂತ 122 ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಎದುರಾಗಿದ್ದು ಈಗಾಗಲೇ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಿಸಲು ಜಿಲ್ಲಾಡಳಿತ ಚಿಕ್ಕೋಡಿ ವಿಭಾಗದಲ್ಲಿ 45 ಭೋಟಗಳ ಸಿದ್ಧತೆಯನ್ನು ಮಾಡಿದ್ದು ಈಗಾಗಲೇ ಎನ್ ಡಿ ಆರ್ ಎಫ್ ತಂಡ ಬಿಡುಬಿಟ್ಟಿದೆ.
ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾಂಗವಸತಿ ಜಲಾವೃತಗೊಂಡಿದ್ದು ಜನಸಾಮಾನ್ಯರು ಭೋಟಗಳ ಸಹಾಯದಿಂದ ನದಿ ದಾಟಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಪ್ರವಾಹ ಭೀತಿ ಉಂಟಾದಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಸಂಪರ್ಕ ವ್ಯವಸ್ಥೆ ಮಾಡಿದ್ದು ಜಿಲ್ಲೆಯಲ್ಲಿ ಎಲ್ಲಿಯಾದರು ಪ್ರವಾಹ್ ಭೀತಿ ಉಂಟಾದಲ್ಲಿ ಕೂಡಲೇ ಸಂಪರ್ಕ ಮಾಡಲು ತಿಳಿಸಿದೆ.