ಆಷಾಡ ಮಾಸ ಪಾಲಿಸಲಿಕೆ ಬಂದ ನವ ವಿವಾಹಿತೆ!  ಪ್ರಿಯಕರನ ಜೊತೆ ಆತ್ಮ ಹತ್ಯೆಗೆ ಶರಣು.

ಮೃತ ಅನುಷಾ ಮತ್ತು ವೇಣು

ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ  ಯುವತಿಯನ್ನು ಬೇರೊಬ್ಬ ಯುವಕನಿಗೆ ಕಳೆದ ತಿಂಗಳಷ್ಟೇ  ಮದುವೆ ಮಾಡಿ ಕೊಟ್ಟಿದ್ದರು. ಆಷಾಡ ಮಾಸ ಪಾಲಿಸಲಿಕ್ಕೆ ಬಂದು ಹಳೆಯ ಪ್ರೀಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಎಂ. ಮುದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಅನುಷಾ (19) ಮತ್ತು ಆಕೆಯ ಪ್ರಿಯತಮ ವೇಣು (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಚಿಕ್ಕಬಳ್ಳಾಪುರ: ಒಂದೇ ಊರಿನ ಇವರಿಬ್ಬರ ಪ್ರೀತಿಗೆ ಅಡ್ಡಿಯಾಗಿದ್ದೆ ಜಾತಿ ಹೌದು ಇವರ ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಇಬ್ಬರನ್ನು ದೂರ ಮಾಡಲು ಬೇರೊಬ್ಬನ ಯುವಕನಿಗೆ ಮದುವೆ ಮಾಡಿಕೊಟ್ಟರೆ ಇವರಿಬ್ಬರ ಪ್ರೀತಿಗೆ ಅಂತ್ಯ ಹಾಡಬಹುದೆಂದು ತಿಳಿದಿದ್ದ ಮನೆಯವರಿಗೆ ಮದುವೆಯಾದ ತಿಂಗಳ ಬಳಿಕ ಆಘಾತವೊಂದು ಕಾದಿತ್ತು. ಹೌದು ಕಳೆದ ಎರಡು ವರ್ಷಗಳಿಂದ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಯುವಕನನ್ನು ಬಿಟ್ಟು ದಾಬಸ ಪೇಟೆಯ ಬೇರೊಬ್ಬ ಯುವಕನ ಜೊತೆಗೆ ಮದುವೆಯಾಗಿದ್ದ ಯುವತಿ. ಮದುವೆಯಾದ ಹೊಸದರಲ್ಲಿ ಆಷಾಢ ಮಾಸ ಪಾಲಿಸುವ ನಿಟ್ಟಿನಲ್ಲಿ ತವರು ಮನೆಗೆ ಬಂದಿದ್ದ ನವ ವಿವಾಹಿತೆ ಎಂ ಮುದ್ದಲಹಳ್ಳಿಯ ಅಜ್ಜಿಯ ಮನೆಗೆಂದು ಬಂದು ಆಕೆಯ ಹಳೆಯ ಪ್ರಿಯಕರಣ ಬೇಟಿ ಮಾಡಿದ್ದಾಳೆ.

ಇವರಿಬ್ಬರ ಭೇಟಿಯ ಸಂದರ್ಭದಲ್ಲಿ ಇಬ್ಬರು ಪರಸ್ಪರ ಮಾತನಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿ ಮುದ್ದನಹಳ್ಳಿ ಗ್ರಾಮದ ಕಾಡಿನಂಚಿನ ಕೃಷಿಹೊಂಡಕ್ಕೆ ತೆರಳಿ ಇಬ್ಬರು ಒಂದೇ ವೇಲಿನಿಂದ ಸೊಂಟಕ್ಕೆ ಕಟ್ಟಿಕೊಂಡು ನೀರಿಗೆ ಹಾರಿದ್ದಾರೆ.  ಎಂ ಮುದ್ದಲಹಳ್ಳಿ ಗ್ರಾಮದ 21 ವರ್ಷದ ಯುವಕ ಹಾಗೂ ಕಾಚಹಳ್ಳಿ ಗ್ರಾಮದ 19 ವರ್ಷದ ಅನುಷಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇನ್ನು ವಿಷಯ ತಿಳಿಯುತ್ತಿದ್ದಂತೆ ಕೆಂಚಾರ್ಲಹಳ್ಳಿ ಠಾಣೆ ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಈ ಕುರಿತು ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಿಸಲಾಗಿದೆ