ಇತ್ತೀಚಿಗೆ ಇನ್ಸ್ಟಾಗ್ರಾಮ, ಫೇಸ್ಬುಕ್, ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಮಾಡುವ ಕೆಲ ಯುವಕ ಯುವತಿಯರ ಹಾಕುವ ಪೋಸ್ಟ್ಗಳಿಗೆ ಮನಸೋತು ಆರಂಭದಲ್ಲಿ ಪರಿಚಯವಾಗಿ ನಂತರ ಪ್ರೀತಿಯ ಬಲೆಗೆ ಬೀಳುವ ಯುವಕ ಯುವತಿಯರು. ಇದೇ ವಿಷಯಕ್ಕೇ ಸಂಬಧಿಸಿದಂತೆ ಆನ್ಲೈನ್ ನಲ್ಲಿ ಆದ ಪರಿಚಯದಿಂದ ಪ್ರೇಮದ ಬಲಿಗೆ ಬಿದ್ದು ಕೊನೆಗೆ ಮದುವೆಯಾದ ವಿವಾಹಿತ ಗರ್ಭಿಣಿ ಮಹಿಳೆ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕ ಘಟನೆ ಶುಕ್ರವಾರ ಬೆಳಗಾವಿಯ ಮಚ್ಚೆಯಲ್ಲಿ ನಡೆದಿದೆ. ಹೌದು ಪೋಷಕರ ವಿರೋಧದ ನಡುವೆಯೂ instagram ನಲ್ಲಿ ಪರಿಚಯವಾದ ಯುವಕನನ್ನು ಮದುವೆಯಾಗಿ ಆತನೊಂದಿಗೆ ಕಳೆದ ಒಂದು ವರ್ಷದಿಂದ ಸಂಸಾರ ನಡೆಸುತ್ತಿದ್ದ ನಯನ ಅಲಿಯಾಸ್ ಮಂಜುಳಾ ಬೋರಪ್ಪ್ ಗಡ್ಡಿಹೊಳಿ ಎಂಬ( 22 ) ಮೈಸೂರು ಮೂಲದ ಗರ್ಭಿಣಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ.
ಬೆಳಗಾವಿ: ಹೌದು ಸಾಮಾಜಿಕ ಜಾಲತಾಣಗಳಲ್ಲಿ ಮೊದಮೊದಲಿಗೆ ಫ್ರೆಂಡ್ಸ್ ಫಾಲವರ್ಸ್ ಅಂತ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಪುಸಲಾಯಿಸುವ ಯುವಕ ಯುವತಿಯರ ಸಂಖ್ಯೆಗೇನು ಕಡಿಮೆ ಇಲ್ಲ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರಿನ ಯುವತಿ ಒಬ್ಬಳು ಬೆಳಗಾವಿಯ ಯುವಕನೊಂದಿಗೆ ರೀಲ್ಸ ಮಾಡುವ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿ ಕಳೆದ ಒಂದು ವರ್ಷದ ಹಿಂದೆ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು. ಪೋಷಕರು ಎಷ್ಟೇ ಬುದ್ಧಿ ಹೇಳಿದರು ಕೇಳದ ಮಗಳು instagram ದಲ್ಲಿ ಹುಚ್ಚು ಹಿಡಿಸಿದ ಬೆಳಗಾವಿ ಹುಡುಗನೇ ಬೇಕೆಂದು ಬೆಳಗಾವಿ ಎತ್ತ ಓಡಿ ಬಂದಿದ್ದಳು.
ಎಷ್ಟೇ ಹೇಳಿದರು ಕೇಳದ ಮಗಳು ಎಲ್ಲೆ ಇರಲಿ ಚೆನ್ನಾಗಿರಲಿ ಎಂದು ಪ್ರೀತಿಸಿದ ಯುವಕ ಬೋರೇಶ್ ಗಡ್ಡಿಹೋಳಿ ಜೊತೆಗೆ ಇರಲು ಹಾರೈಸಿದ ಪೋಷಕರು. ಇನ್ನೇನು ಇವರಿಬ್ಬರ ಪ್ರೇಮ ಸಾಕ್ಷಿಯ ಪ್ರೀತಿಯ ಫಲವಾಗಿ ಮಂಜುಳಾ ಗರ್ಭಿಣಿಯಾಗಿದ್ದಳು. ಹಾಗೇ ಜಗತ್ತನ್ನೆ ಕಾಣದ ಮಗು ಹೊಟ್ಟೆಯಲ್ಲಿರುವಾಗಲೇ ತಾಯಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೌದು ಇದೆಲ್ಲಾ ಆಗಿರುವುದು ಬೆಳಗಾವಿ ನಗರಕ್ಕೆ ಅಂಟಿಕೊಂಡ ಮಚ್ಚೆ ಎಂಬ ಗ್ರಾಮದಲ್ಲಿ.
ಮಂಜುಳಾ ಪಾಲಕರ ಆರೋಪ್
ತಾಯಿಯ ಮನೆಯಲ್ಲಿ ರಾಣಿಯ ಹಾಗೇ ಇದ್ದ ಮಂಜುಳಾ ಗಂಡನ್ ಮನೆಗೆ ಬಂದ ಮೇಲೆ ಶೆಡ್ ಒಂದರಲ್ಲಿ ಜೀವನ ಸಾಗಿಸಬೇಕಾಗಿತ್ತು. ಇತ್ತ ದಿನಗಳು ಕಳೆದ ಹಾಗೇ ಗಂಡನ ತಂದೆ ತಾಯಿಯಿಂದ ಕಿರುಕುಳ ಹೆಚ್ಚಾಗಿತ್ತು. ಗಂಡನಾದವನು ಕೆಲಸಕ್ಕೆ ತೆರಳದೆ ಪೋಲಿ ಅಲಿಯುತ್ತಿದ್ದನಂತೆ ಹೀಗಿರುವಾಗ ಮಂಜುಳಾನೇ ದಿನನಿತ್ಯ ಕೆಲಸಕ್ಕೆ ಎಂದು ತೆರಳುತ್ತಿದ್ದಳು ಇದರ ಮಧ್ಯೆ ಗರ್ಭಿಣಿಯಾದರೆ ಕೆಲಸಕ್ಕೆ ಹೋಗುವುದಿಲ್ಲ, ಮನೆ ನಡಿಯಲ್ಲ ಎಂಬ ದೃಷ್ಟಿಯಿಂದ ಮಗುನ್ನು ತೆಗೆಯಿಸು ಎಂದು ಕಿರುಕುಳ ನೀಡುತ್ತಿದ್ದಾರೆಂದು ಮಂಜುಳಾ ತಮ್ಮ ಸಂಬಂಧಿಕರೊಂದಿಗೆ ವಾಟ್ಸಪ್ ವಾಯ್ಸ್ ಮೂಲಕ ಹೇಳಿಕೊಂಡಿದ್ದಾಳೆ. ಇನ್ನು ಘಟನೆ ನಡೆದ ರಾತ್ರಿಯಿಂದಲೇ ಗಂಡ ಹಾಗೂ ಅತ್ತೆ ಮಾವ ಕಾಣೆಯಾಗಿರೋದು ಪೋಷಕರ ಆರೋಪಕ್ಕೆ ಪುಷ್ಟಿ ನೀಡುವಂತಾಗಿದೆ.
ಇನ್ನು ಗರ್ಭಿಣಿ ಮಹಿಳೆ ಅತ್ತೆ ಮಾವನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ? ಅಥವಾ ತಾನೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬ ಪ್ರಶ್ನೆ ತನಿಖೆ ನಂತರ ತಿಳಿದುಬರಲಿದೆ.
ಸ್ಥಳಕ್ಕೆ ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದಿದ್ದು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳನ್ನು ರಚನೆ ಮಾಡಿದ್ದು ತೀವ್ರ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಗುರುತು ಪರಿಚಯ ಇಲ್ಲದವನ ಜೊತೆಗೆ Instagram ದಲ್ಲಿ ಅರಳಿದ ಪ್ರೇಮ ಮದುವೆಯಾಗಿ ಬಾಳಿ ಬದುಕಬೇಕಾಗಿದ್ದ ಮಗಳು ಮಸಣದ ದಾರಿ ಹಿಡಿದಿರೋದು ನಿಜಕ್ಕೂ ದುರ್ದೈವದ ಸಂಗತಿ. ಹೀಗೇ ಆನ್ಲೈನ್ ಮೂಲಕ ಪರಿಚಯವಾಗಿ ಗುರುತು ಪರಿಚಯ ಇಲ್ಲದೆ ಆಕಸ್ಮಿಕ ಹುಟ್ಟುವ ಇಂತಹ ಪ್ರೇಮ ಪ್ರಕರಣಗಳು ಕೊನೆಗೆ ಸಾವಿನಲ್ಲಿ ಅಂತ್ಯವಾಗುತ್ತವೆ. ಈ ಪ್ರಕರಂದಿಂದಾದರು ಇಂತಹ ಆನ್ಲೈನ್ ಪ್ರೇಮಕ್ಕೆ ಬಲಿಯಾಗುವ ಯುವಕ ಯುವತಿಯರಿಗೆ ಪಾಠವಾಗಲಿ ಎಂಬುದೇ ನಮ್ಮಯ ಆಸೆಯ.