ಸಮಾಜ ಸೇವೆ ಮಾಡಲು ಬಯಸುವ ಹೃದಯವಂತ ನಾಗರಿಕರು ವೃದ್ಧರಿಗೆ, ಅಂಗವಿಕಲರಿಗೆ, ಗರ್ಭಿಣಿ ಮಹಿಳೆಯರಿಗೆ, ಹಾಗೂ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ ಮಾಡಿರುವವರನ್ನು ನೋಡಿರುತ್ತಿರಿ, ಆದರೆ ಇಲ್ಲೊಂದು ಕುಡಕರಿಗಾಗಿ ಅಪರೂಪದ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದೆ. ಆಟೋರಿಕ್ಷಾ ಮೇಲೆ ರಚನಾ ಬಾರ್ ಅಂಡ್ ರೆಸ್ಟೋರೆಂಟ್ ನ ಉಚಿತವಾಹನದ ವ್ಯವಸ್ಥೆ ಅಂತ ಬ್ಯಾನರ್ ಹಾಕಿಕೊಂಡ ಅಟೋ ರಿಕ್ಷಾ ಫೋಟೊ ವೈರಲ್ ಆಗಿದೆ.
ಉಡುಪಿ: ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಜನಸೇವೆ ಎಂದು ಸಾಮಾಜಿಕ ಕಳಕಳಿಗಳನ್ನು ಹೊಂದಿರುವ ಹೃದಯವಂತ ನಾಗರಿಕರು ಗರ್ಭಿಣಿ ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ವಯಸ್ಸಾದ ನಾಗರಿಕರಿಗೆ ಆಸ್ಪತ್ರೆ ಹಾಗೂ ದೇವಸ್ಥಾನಗಳಿಗೆ ತೆರಳುವ ಸಲುವಾಗಿ ಉಚಿತವಾಹನ ಸೌಕರ್ಯ ಕಲ್ಪಿಸಿದ ಉದಾಹರಣೆಗಳು ಇವೆ. ಆದರೆ ಇಲ್ಲೊಂದು ಅಪರೂಪದ ವ್ಯವಸ್ಥೆ ಕಲ್ಪಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆದ ಸುದ್ದಿ ಎಲ್ಲೆಡೆ ಹರಡಿದೆ. ಹೌದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಇರುವ ರಚನಾ ಬಾರ್ ಅಂಡ್ ರೆಸ್ಟೋರೆಂಟ್ ಗ್ರಾಹಕರನ್ನು ಸೆಳೆಯಲು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಉಚಿತವಾಹನ ವ್ಯವಸ್ಥೆ ಮಾಡಿದ ಅಪರೂಪದ ಸುದ್ದಿ ಒಂದು ವೈರಲಾಗಿದೆ.
ಬಾರಿಗೆ ಬಂದು ಕಂಠಪೂರ್ತಿ ಕುಡಿದು ಟೈಟಾಗಿ ಮನೆಗೆ ತೆರಳಲು ಆಗದೆ ರಸ್ತೆ ಬದಿ ಅಥವಾ ಅಲ್ಲಿ ಇಲ್ಲಿ ತೂರಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ನಿಟ್ಟಿನಲ್ಲಿ ಕುಡುಕರನ್ನು ಸುರಕ್ಷಿತವಾಗಿ ತಮ್ಮ ಬಾರಿನಿಂದ ತೆರಳುವ ಸಲುವಾಗಿ ಆಟೋ ಒಂದರ ಮೂಲಕ ಉಚಿತ ವಾಹನ ವ್ಯವಸ್ಥೆ ಮಾಡಿದ ಮಾಲೀಕರು. ಹೀಗೇ ಇದರ ಕುರಿತು ರಚನಾ ಬಾರ್ ಅಂಡ್ ರೆಸ್ಟೋರೆಂಟ್ ಬ್ಯಾನರ್ ಹಾಕಿಸಿದ ಪೋಸ್ಟ್ “Namm kudla- Mangalore” ಎಂಬ ಫೇಸ್ಬುಕ್ ಪುಟದಲ್ಲಿ ಹಾಕಲಾದ ಸುದ್ದಿ ನಿನ್ನೆಯಿಂದ ಬಾರಿ ವೈರಲ್ ಆಗಿದ್ದು. ಅದರಲ್ಲೂ Tite and free drop service ಅಂತ ಬರೆದು ಈ ಪೋಸ್ಟಿಗೆ ಈಗಾಗಲೇ ಸಾವಿರಾರು ಲೈಕ್ ಹಾಗೂ ಅತಿ ಹೆಚ್ಚು ಕಮೆಂಟ್ ಕೂಡ ಪಡೆದುಕೊಂಡಿದೆ. ಕಾಮೆಂಟ್ ಬಾಕ್ಸ್ ನಲ್ಲಂತೂ ಬಗೆ ಬಗೆಯ ಕಮೆಂಟ್ ಮೂಲಕ ಬರೆದುಕೊಂಡಿದ್ದಾರೆ. ಕುಡುಕರಿಗಾಗಿ ಇದೆ ಮೊದಲ ಬಾರಿಗೆ ಉಚಿತವಾಹನ ಕಲ್ಪಿಸಿದ ಸುದ್ದಿ ಕೇಳಿ ಕೆಲವರು ಹುಬ್ಬೆರಗಿಸಿದಂತು ನಿಜವೇ ಸರಿ.