ಇತ್ತೀಚೆಗೆ ಕೆಲ ಜನರು ಹಣದಾಸೆಗೆ ಎಂತಹ ಕೆಲಸಕ್ಕಾದ್ದರು ಕೈ ಹಾಕೋಕೆ ಸೈ! ಅಂತಾರೆ. ಹೌದು ಹಿರಿಯರ ಗಾದೆ ಮಾತಿನಂತೆ ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಜಾಯಮಾನ ಇದು. ಕೆಲವರು ಬ್ಯಾಂಕಿನವರ ಸೋಗಿನಲ್ಲಿ ವಂಚಿಸಿದರೆ ಇನ್ನು ಕೆಲವರು ಆನ್ಲೈನ್ ನಲ್ಲಿ ಲಿಂಕ್ ಕಳುಹಿಸುವ ಮೂಲಕ ವಂಚನೆ ಮಾಡುತ್ತಾರೆ. ಆದರೆ ಇವತ್ತಿನ ಸ್ಟೋರಿನೇ ಬೇರೆ. ಹೌದು ಇದು ವರೆಗೂ ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿ ಹಣ ಒಡವೆ ಬಂಗಾರದೊಡನೆ ಪರಾರಿಯಾಗುತ್ತಿದ್ದ ಕಿಲಾಡಿ ಲೇಡಿಯನ್ನು ಬಂಧಿಸಿ ಪೋಲೀಸ ಠಾಣೆಯ ಅತಿಥಿಯನ್ನಾಗಿಸಿದ್ದಾರೆ.
ಇದು ಖತರ್ನಾಕ್ ಕಿಲಾಡಿ ಮಹಿಳೆಯ 50 ಜನರನ್ನು ಮದುವೆಯಾದ್ ರೋಚಕ ಕಹಾನಿ ಈ ಘಟನೆ ನಮ್ಮ ರಾಜ್ಯದ ನೆರೆಯ ತಮಿಳುನಾಡಿನ ತಿರುಪುರದಲ್ಲಿ ನಡೆದಿದ್ದು, ಆನ್ಲೈನ್ ಪ್ಲಾಟ್ ಫಾರ್ಮ್ ದಿ ತಮಿಳು ವೇ ನಲ್ಲಿ 35 ವರ್ಷದ ಯುವಕನಿಗೆ ಪರಿಚಯವಾದ (30) ವರ್ಷದ ಸಂಧ್ಯಾ ಎಂಬ ಮಹಿಳೆ ಕೆಲವು ದಿನಗಳ ನಂತರ ಮದುವೆಯಾಗಿದ್ದಳು. ಮದುವೆ ನಂತರ ಆಕೆಯ ನಡುವಳಿಕೆಯಲ್ಲಿ ಮತ್ತು ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬಂದು ಆಕೆಯ ಆಧಾರ್ ಕಾರ್ಡ್ ಪರಿಶೀಲಿಸಿದಾಗ. ಆಧಾರ ಕಾರ್ಡ್ ನಲ್ಲಿ ಸಂಧ್ಯಾಳ ಪತಿಯ ಹೆಸರೆ ಬೇರೆ ಇದೇ. ಹೀಗಾಗಿ ಇದನೆಲ್ಲ ಅರಿತ ಯುವಕ ತನಗೆ ವಂಚನೆ ಮಾಡಿದ್ದಾಳೆ ಎಂದು ತಿಳಿದ ಮೇಲೆ ನೇರವಾಗಿ ತೆರಳಿ ತಾರಾಪುರಂ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಸಂದ್ಯಾಳನ್ನು ವಿಚಾರಣೆ ನಡೆಸಿದ ಬಳಿಕ ಆಕೆಯಿಂದ ಬಯಲಾಗಿದ್ದು ಹಲವಾರು ಪ್ರಕರಣಗಳು ಅದೇ ರೀತಿ ಆಕೆಗೆ 10 ವರ್ಷಗಳ ಹಿಂದೆಯೇ ಒಂದು ಮದುವೆಯಾಗಿತ್ತು ಆಕೆಗೆ ಒಂದು ಮಗು ಕೂಡ ಇತ್ತು. ಗಂಡನಿಂದ ಬೇರ್ಪಟ್ಟ ಸಂಧ್ಯಾ ಹಣದ ಆಸೆಗಾಗಿ ಜನರನ್ನು ಯಾಮಾರಿಸುತ್ತಾ ಮದುವೆಯಾಗದ ಯುವಕರನ್ನೇ ಟಾರ್ಗೆಟ್ ಮಾಡಿ ಮದುವೆಯಾಗಿ ಸ್ವಲ್ಪ ದಿನ ಅವರ ಜೊತೆಗೆ ಕಳೆದು ಅವರಲ್ಲಿರುವ ದುಡ್ಡು ಬಂಗಾರವನ್ನು ಎತ್ತಿಕೊಂಡು ಪರಾರಿಯಾಗಿತ್ತಿದ್ದಳು. ಹೀಗೆ ಉದ್ಯಮಿಗಳು ಸೇರಿದಂತೆ ಉನ್ನತ ಅಧಿಕಾರಿಗಳನ್ನು ಕೂಡ ಪಂಗನಾಮ ಹಾಕಿದ ಮಹಿಳೆ ಈಕೆಯಾಗಿದ್ದಾಳೆ. ಸಂದ್ಯಾಳ ಮೋಸದಾಟ ಬಯಲಾಗಿದ್ದು ಸದ್ಯ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾಳೆ.