ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಅಂಚೆ ಚೀಟಿ ಬಿಡುಗಡೆ.

ದೇಶ ಕಲ್ಯಾಣಕ್ಕಾಗಿ  ಬಾಲ್ಯದಲ್ಲಿಯೇ ಮನೆ ಬಿಟ್ಟು ದೇಶ್ ಸಂಚಾರಿ ಮಾಡಿದ  ಸದ್ಗುರು ಶ್ರೀ ಸಿದ್ಧಾರೂಢರು ಹುಟ್ಟಿದ್ದು ಬೀದರ ಜಿಲ್ಲೆಯ ಚಳಕಾಪುರ ಗ್ರಾಮದಲ್ಲಾದರು.  ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದು ಕೊನೆಗೆ ಸಮಾಧಿಯಾದದ್ದು ಮಾತ್ರ ಹುಬ್ಬಳ್ಳಿಯಲ್ಲಿ. ಭಕ್ತರ ಆರಾಧ್ಯ ದೈವ, ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲಿಯುಗದ ಕಾಮಧೇನು, ನರನ ರೂಪದಲ್ಲಿರುವ ಹರನು, ಸಾಕ್ಷಾತ್ ಪರಮಾತ್ಮ,  ಶ್ರೀ ಸಿದ್ಧಾರೂಢರು ಮಾಡಿದ ಪವಾಡಗಳಂತೂ ಹಲವಾರು, ಭಕ್ತಿಯಿಂದ ಆರಾಧಿಸಿದ ಭಕ್ತರ ಉದ್ಧಾರ ಮಾಡುವ ಸಾಕ್ಷಾತ್ ಶಿವನ ಅವತಾರವೇ ಸದ್ಗುರು ಶ್ರೀ ಸಿದ್ಧಾರೂಢರು. ಇಂತಹ ಮಹಾನ್ ಪವಾಡ ಪುರುಷರ ಭಾವಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ಇಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ ನೆರವೇರಲಿದೆ.

ಧಾರವಾಡ ಜು. 06: ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಟ್ರಸ್ಟ್ ಕಮಿಟಿಯ 25 ವರ್ಷಗಳ ಹಿಂದಿನ ಕನಸು ಇಂದು ನನಸಾಗಿದ್ದು, ಇಂದು (ಜು.06) ರಂದು ಸಾಯಂಕಾಲ ಶ್ರೀಮಠದ ಆವರಣದಲ್ಲಿ ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ ನವದೆಹಲಿ ಇವರ ಸಹಯೋಗದಲ್ಲಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ್ ಭಾವಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇನ್ನು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಶ್ರೋ.ಬ್ರ.ಜಗದ್ಗುರು ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು, ಸಹಜಯೋಗಿ ಶ್ರೀ ಸಹಚಾನಂದ ಮಹಾಸ್ವಾಮಿಗಳು ಚಿಕ್ಕನಂದಿ- ಮಹಾಲಿಂಗಪುರ ಶ್ರೀ ಸಿದ್ದಾರೂಢ ದರ್ಶನ ಪೀಠ, ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹ ಮಠ ಅಣ್ಣಗೇರಿ ಅವರು ಸಾನಿಧ್ಯವನ್ನು ವಹಿಸುವರು. ಗೌರವಾನ್ವಿತ ಅಧ್ಯಕ್ಷತೆಯನ್ನು ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ ವಹಿಸುವರು. ಅದೇ ರೀತಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಅಂಚೆ ಚೀಟಿ ಬಿಡುಗಡೆಯನ್ನು ಮಾಡುವರು. ಶ್ರೀ ಎಸ್ ರಾಜೇಂದ್ರಕುಮಾರ್ ಚೀಪ್ ಪೋಸ್ಟ್ ಮಾಸ್ಟರ್ ಜನರಲ, ಕರ್ನಾಟಕ ವಲಯ ಬೆಂಗಳೂರು ಹಾಗೂ ಶ್ರೀ ರಾಮನ ಬಡಿಗೇರ್,  ಶ್ರೀ ಶ್ರೀಪಾದ ನಾಯಕ್ ಶ್ರೀ ಜಗದೀಶ್ ಶೆಟ್ಟರ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಎಚ್ ಕೆ ಪಾಟೀಲ್, ಸಚಿವ ಸಂತೋಷ್ ಲಾಡ್ ಅತಿಥಿಗಳಾಗಿ ಭಾಗವಹಿಸುವರು.