ಎಚ್ ಡಿ ರೇವಣ್ಣ ಕುಟುಂಬಕ್ಕೆ ಲೈಂಗಿಕ್ ಪ್ರಕರಣಗಳ ಉರುಳು; ಸಲಿಂಗ ಲೈಂಗಿಕ್ ಕಿರುಕುಳ ಪ್ರಕರಣದಲ್ಲಿ   ಸೂರಜ್ ರೇವಣ್ಣ ಬಂಧನ.

HD ರೇವಣ್ಣ ಅವರ ಮತ್ತೊಬ್ಬ ಮಗ ಸೂರಜ್ ರೇವಣ್ಣ ಅಸಹಜ ಲೈಂಗಿಕ ಪ್ರಕರಣದಲ್ಲಿ ಬಂಧನ

ಕಳೆದ ಎರಡು ತಿಂಗಳುಗಳಿಂದ ಪೆಂಡ್ರೈವ ಕೇಸ್ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಹಾಗೂ ಅದೇ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಪ್ರಕರಣವನ್ನು ಎದುರಿಸುತ್ತಿರುವಾಗಲೇ. ಇದೀಗ ಅವರ ಕುಟುಂಬದ ವಿರುದ್ಧ ಮತ್ತೊಂದು ಲೈಂಗಿಕ ಪ್ರಕರಣ  ಹೊರಬಿದ್ದಿದೆ. ಹೌದು ಜೆಡಿಎಸ ನ್ ವಿಧಾನ ಪರಿಷತ್ ಸದಸ್ಯ (MLC) ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಮಗನಾದ ಸೂರಜ್ ರೇವಣ್ಣ ವಿರುಧ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹಾಸನದ ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ( Sexual Assault ) ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರ ಇನ್ನೊಬ್ಬ ಮಗ ಬಂಧನವಾಗುತ್ತಿದ್ದಂತೆ ದೇವೇಗೌಡರ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ರಾಜಕೀಯ ರಂಗದಲ್ಲಿ ದೇವೇಗೌಡರ ಕುಟುಂಬ ಅಂದರೆ ಅವರದೇ ಆದಂತಹ ಇತಿಹಾಸವಿದೆ. ಆದರೆ ಇತ್ತೀಚಿಗೆ ನಡೆದ ಲೈಂಗಿಕ ಪ್ರಕರಣಗಳಿಂದ ದೇವೇಗೌಡರ ಕಟ್ಟಿದ ಸಾಮ್ರಾಜ್ಯಕ್ಕೆ ಕುತ್ತು ಬಂದಂತಾಗಿದೆ. ಹೌದೂ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತ ಶನಿವಾರ ದಿನ ನೀಡಿದ ದೂರು ಆದರಿಸಿ ಐಪಿಸಿ ಸೆಕ್ಷನ್ 377, 342, ಹಾಗೂ 506 ರಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರಿನ ಅನ್ವಯ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ವಿರುಧ್ದ ಪ್ರಕರಣ ದಾಖಲಾಗಿದೆ.

ಸೂರಜ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಹಾಸನದ ಸೇನ್ ಪೊಲೀಸ್ ಠಾಣೆಗೆ ತೆರಳಿದ ಸೂರಜ್ ರೇವಣ್ಣ ದೂರುದಾರ ತಮ್ಮನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆ ಎಂದು ದೂರು ನೀಡಲು ಹೋಗಿದ್ದ ಸೂರಜ, ತಾನಾಗಿ ತಾನೇ ಹೋಗಿ ಸಿಕ್ಕಾಕೊಂಡಾಗಿದೆ, ಬೆಳಗಿನ ನಾಲ್ಕು ಗಂಟೆಯವರೆಗೆ ವಿಚಾರಣೆ ನಡೆಸಿದ ಪೊಲೀಸರು ವಿಚಾರಣೆ ಬಳಿಕ ಸೂರಜ್ ರೇವಣ್ಣನನ್ನು ಬಂಧಿಸಿದರು.ಸೂರಜ್ ರೇವಣ್ಣ ಅವರ ಪ್ರಕರಣದಲ್ಲಿ ತನಿಖಾಧಿಕಾರಿಯಾದ ಪ್ರಮೋದ್ ಕುಮಾರ್ ಬಂಧಿಸಿದ್ದಾರೆ.

ಸೂರಜ್ ರೇವಣ್ಣ ಗೆ ಪರಿಚಿತನಾದ ಜೆಡಿಎಸ್ ನ ಕಾರ್ಯಕರ್ತ ಹಾಗೂ ದೂರುದಾರನಿಗೆ ಕೆಲಸ ಕೊಡಿಸುತ್ತೇನೆಂದು ಜೂನ್ 16 ರಂದು ಸೂರಜ್ ರೇವಣ್ಣರಿಗೆ ಸಂಬಂಧಿಸಿದ ಗನ್ನಿಕಡ್ ಫಾರ್ಮ ಹೌಸ್ ಗೆ ಕರೆಸಿಕೊಂಡು ತಮ್ಮ ಮೇಲೆ ಸೂರಜ್ ಅವರು  ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರು ಸಲ್ಲಿಸಿದ್ದಾನೆ. ಇದಕ್ಕೆ ಪ್ರತಿ ವಿರೋಧವಾಗಿ ಹನುಮನಹಳ್ಳಿಯ ಶಿವಕುಮಾರ್ ಎಂಬ ಸೂರಜ್ ರೇವಣ್ಣರ ಆಪ್ತ ದೂರುದಾರನ ವಿರುದ್ಧವೇ ಹೊಳೆನರಸೀಪುರ ಠಾಣೆಯಲ್ಲಿ ಶುಕ್ರವಾರ ಪ್ರತಿ ದೂರು ದಾಖಲಿಸಿದ್ದಾನೆ.

ಇದೇ ಪ್ರಕಾರದ ಕುರಿತು ಶನಿವಾರ ದಿನ ಖುದ್ದು ಸೂರಜ್ ಅವರೇ ಹಾಸನ್ ಪೊಲೀಸ್ ಠಾಣೆಗೆ ಬಂದು ದೂರುದಾರನ ವಿರುದ್ಧ ಪ್ರತಿದವರು ದಾಖಲಿಸಿದ್ದಾರೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪೊಲೀಸ ಅಧಿಕಾರಿಗಳು ಕೊನೆಗೆ ಸುರೇಶ ಅವರನ್ನು ಬಂಧಿಸಿದ್ದಾರೆ. ದೂರುದಾರನನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿ ಮೆಡಿಕಲ್ ತಪಾಸಣೆ ನಡೆಸುತ್ತಿದ್ದಾರೆ.