ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ರಾಜ್ಯದ ಜನತೆಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ. ಹೌದು ಲೋಕಸಭೆ ಚುನಾವಣೆ ಫಲಿತಾಂಶ ಇದೆ ತಿಂಗಳು 4 ನೇ ದಿನಾಂಕದಂದು ಪ್ರಕಟಗೊಂಡ ಬಳಿಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಇಲಾಖೆಗಳ ಜೊತೆ ಖುದ್ದು ಸಮಾಚಾರ ಸಮಾಲೋಚನೆ ನಡೆಸಿದ್ದು ಆದಾಯ ಹೆಚ್ಚಿಸುವ ಉಪಾಯ ಬಗ್ಗೆ ಚರ್ಚಿಸಿದ್ದಾರೆ. ಸರ್ಕಾರ ಈಗಾಗಲೇ ಮಧ್ಯ ದರ ಹೆಚ್ಚಳ ಮಾಡಿದ್ದು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟದ ಮೇಲಿನ ತೆರಿಗೆ ಹೆಚ್ಚಳದ ಮೂಲಕ ಖಜಾನೆ ತುಂಬಿಸಲು ಮುಂದಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿಲಿಟರಿಗೆ ರೂ.3 ಏರಿಕೆ ಮಾಡುವಂತೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಸರಕು ಸಾಗಾಣಿಕೆಗೆ ಅಗತ್ಯವಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇ ಏರಿಕೆ ಆದರೆ ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳ ಬೆಲೆಯೂ ಕೂಡ ಹಂತ ಹಂತವಾಗಿ ಗಗನಕ್ಕೆರುತ್ತವೆ.
ಪೆಟ್ರೋಲ್ ಡೀಸೆಲ್ ದರ ಏರಿಕೆ ಆದರೆ ದಿನಬಳಕೆಯ ಪ್ರತಿಯೊಂದು ವಸ್ತುಗಳ ಮೇಲೆ ಕ್ರಮೇಣ ಬೆಲೆ ಏರಿಕೆಯ ಪರಿಣಾಮ ಬೀರುವುದು ಸಹಜವಾಗಿದೆ. ಈಗಾಗಲೇ ತರಕಾರಿ ದರ ಅಂತು ಹೆಚ್ಚಾಗಿದ್ದು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಚಿಲ್ಲರೆ ಮಾರಾಟ ತೆರಿಗೆ (Retail Sales Tax) ದರವನ್ನು ಹೆಚ್ಚಳ ಮಾಡುವ ನಿರ್ಧಾರ ಕರ್ನಾಟಕ ಸರ್ಕಾರ ಶನಿವಾರ ಪ್ರಕಟಿಸಿದೆ.
ಸದ್ಯ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ಪ್ರಸ್ತುತ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ದರ 99.84 . ಡೀಸೆಲ್ ದರ ಲೀಟರಿಗೆ 85.93 ಆಗಿದೆ. ಪ್ರಯಾಣದ ಹಾಗೂ ಸಾಗಾಟದ ವೆಚ್ಚಕ್ಕೆ ಅನುಗುಣವಾಗಿ ಬೇರೆ ಬೇರೆ ಜಿಲ್ಲೆಗಳ ಮತ್ತು ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ದರ ವ್ಯತ್ಯಾಸವಾಗುವುದರಿಂದ ಇನ್ನೂ ದರ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ ರೂ.3 50 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.