ರಸ್ತೆ ಅಪಘಾತಗಳ ಕುರಿತು ರಾಜ್ಯ ಪೊಲೀಸ್ ಇಲಾಖೆ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸಿದರು, ರಾಜ್ಯದಲ್ಲಿ ದಿನಂಪ್ರತಿ ಅಪಘಾತ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಲೇ ಇವೇ. ಅದರಲ್ಲೂ ಕೂಡ ಪ್ರಮುಖವಾಗಿ ಯುವಕರು ಅಪಘಾತದಲ್ಲಿ ಪ್ರಾಣವನ್ನು ಕಳೆದು ಕೊಳ್ಳುತ್ತಿರುವ ಪ್ರಕರಣಗಳಂತೂ ಅತಿಯಾಗಿದೆ. ಇನ್ನು ಅಪಘಾತಗಳಿಗೆ ಕಾರಣವೆಂದರೆ ಸರಿಯಾದ ನಿಯಮ ಹಾಗೂ ಅತಿಯಾದ ವೇಗ ಅಜಾಗರೂಕತೆಯಿಂದ ವಾಹನಗಳನ್ನು ಓಡಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದೇ ಊರಿನ ಸ್ನೇಹಿತರಿಬ್ಬರ ಬೈಕ್ ಹಾಗೂ ಕ್ರೂಜರ್ ನಡುವಿನ ರಸ್ತೆ ಅಪಘಾತ ಪ್ರಕರಣ ತಡರಾತ್ರಿ ಯರಗಟ್ಟಿ ಹಾಗೂ ಲೋಕಾಪುರ್ ರಸ್ತೆ ನಡುವಿನ ಕೊರಕೊಪ್ಪ ಎಂಬ ಗ್ರಾಮದ ಹತ್ತಿರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರರಾದ ಇಬ್ಬರು ಸ್ನೇಹಿತರು ಹಾಗೂ ಜೊತೆಗೆ ಒಂದು ಪುಟ್ಟ ನಾಯಿಮರಿ ಕೂಡ ಸಾವನ್ನಪ್ಪಿದೆ.
ಬೆಳಗಾವಿ: ಯರಗಟ್ಟಿ ಹಾಗೂ ಲೋಕಾಪುರ ರಸ್ತೆ ನಡುವಿನ ಕೋರಕೊಪ್ಪ ಗ್ರಾಮದ ಹತ್ತಿರ ತಡರಾತ್ರಿ NS ಬೈಕ್ ಹಾಗೂ KA 22 N 3864 ನಂಬರಿನ ಕ್ರೂಜರ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಕ್ರೂಜರ್ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಸವಾರರಿಬ್ಬರು ಹಾರಿ ಬಿದ್ದ ಪರಿಣಾಮ ಅವರಿಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೈಕ್ ಸುಟ್ಟು ಕರಕಲವಾಗಿದೆ. ಜೊತೆಗೆ ಬೈಕ್ ಸವಾರರದೆನ್ನಲಾದ ನಾಯಿಮರಿ ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಅಪಘಾತದಲ್ಲಿ ಮೃತಪಟ್ಟವರು ರಾಮದುರ್ಗ ತಾಲೂಕಿನ ಗುದಗೊಪ್ಪ ಗ್ರಾಮದವರಾಗಿದ್ದು. ಶ್ರೀರಾಮ್ ಹನುಮಂತ ತಳಗಡಿ ಹಾಗೂ ಯಶವಂತ ತಳಗಡಿ ಮೃತ ದುರ್ದೈವಿಗಳು. ಅಪಘಾತದಲ್ಲಿ ಸಾವನ್ನಪ್ಪಿದ್ದ ಇಬ್ಬರೂ ಬೈಕ್ ಸವರಾರು ಆತ್ಮೀಯ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಇನ್ನು ಈ ಪ್ರಕರಣ ಮುರುಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ನಡೆಸುತ್ತಿದ್ದಾರೆ.