ರಾಜ್ಯದಲ್ಲಿ ಪದೇ ಪದೇ ದೇಶ ವಿರೋಧಿ ಘೋಷಣೆಗಳು ನಡೆಯುತ್ತಲೇ ಇವೆ. ಕೆಲ ತಿಂಗಳುಗಳ ಹಿಂದೆ ವಿಧಾನಸೌಧದಲ್ಲಿ ಪಾಕ ಪರ್ ಘೋಷಣೆ ಕೂಗಿದ್ದ ಆರೋಪಿಗಳು. ಹಾಗೆ ಇದೆ ವಿಷಯಕ್ಕೆ ಸಂಬಂಧಿಸಿದಂತೆ ಇಂತಹದೇ ದೇಶ ವಿರೋಧಿ ಘೋಷಣೆಯನ್ನು ಇಂದು ನಟೋರಿಯಸ್ ಪಾತಕಿ ಒಬ್ಬ ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲಿ ಪಾಕ ಪರ ಪಾಕಿಸ್ತಾನ್ (Pakistan Jindabad) ಜಿಂದಾಬಾದ ಎಂದು ಘೋಷಣೆ ಕೂಗಿದ್ದಾನೆ. ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲೇ ಇದ್ದ ವಕೀಲರು ಹಾಗೂ ಸಾರ್ವಜನಿಕರು ಆತನಿಗೆ ಥಳಸಿದ್ದಾರೆ. ನಟೋರಿಯಸ್ ಪಾತಕಿಗೆ ಧರ್ಮದೇಟು ಬೀಳುತ್ತಿದ್ದಂತೆ ಪೊಲೀಸರು ಆತನನ್ನು ರಕ್ಷಿಸಿ ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋದರು.
ಬೆಳಗಾವಿ: ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಈತನು ಐಪಿಎಸ್(IPS) ಅಧಿಕಾರಿ ಅಲೋಕ್ ಕುಮಾರ್(Alok Kumar) ಅವರಿಗೆ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಕೂಡ ಬೆಳಗಾವಿಯ ಹಿಂಡಲಗ ಜೈಲಿನಲ್ಲಿ ಇದ್ದುಕೊಂಡೆ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿದ್ದ. ಆರೋಪಿ ಜಯೇಶ ಪೂಜಾರಿಯನ್ನು ಇಂದು (ಜೂನ್ 12)ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ನ್ಯಾಯಾಲಯದಲ್ಲಿ ತನ್ನ ಆಹವಾಲವನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿ ಜಯೇಶ್ ಪೂಜಾರಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಜಯೇಶ್ ಪೂಜಾರಿ ಈತ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿರುವ ಅವರ ಕಚೇರಿಗೆ ಫೋನ್ ಮೂಲಕ ಕರೆ ಮಾಡಿ 10 ಕೋಟಿ ನೀಡದಿದ್ದರೆ ಬಾಂಬ್ ಸ್ಪೋಟಿಸುವುದಾಗಿ ಜೀವ ಬೆದರಿಕೆ ಹಾಕಿದ್ದನು. ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಹಾರಾಷ್ಟ್ರ ಪೊಲೀಸರು ತನಿಖೆ ವೇಳೆ ಮಂಗಳೂರಿನಲ್ಲಿ ನಡೆದ ಡಬಲ್ ಮರ್ಡರ್ ಆರೋಪಿ ಹಾಗು ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಜನವರಿ 14 ಮತ್ತು ಮಾರ್ಚ್ 21 ರಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ ಫೋನ್ ಮೂಲಕ ಬೆದರಿಕೆ ಹಾಕಿದ್ದ.
ಇಂದು (ಜೂ.12) ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಕುರಿತು ಇಂದು ಬೆಳಗಾವಿಯ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿ ಜಯೇಶ ಪೂಜಾರಿಯನ್ನು ಕರೆ ತಂದಿದ್ದರು ನ್ಯಾಯಾಲಯದಲ್ಲಿ ತನ್ನ ಪರ ಅಹವಾಲು ಸ್ವೀಕರಿಸುತ್ತಿಲ್ಲ ಅಂತ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ಮೂಲಕ ತನ್ನ ವಿಕೃತಿಯನ್ನು ಹೊರ ಹಾಕಿದ್ದಾನೆ. ಆರೋಪಿ ಹಾಕ ಪರ ಘೋಷಣೆ ಕೂಗುತ್ತಿದ್ದಂತೆ ಅಲ್ಲೇ ಸ್ಥಳದಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಆರೋಪಿಯನ್ನು ಸರಿಯಾಗಿ ಥಳಿಸಿದ್ದಾರೆ ಇನ್ನು ಆರೋಪಿಯನ್ನು ರಕ್ಷಣೆ ಮಾಡಿದ ಪೊಲೀಸರು ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.