ಇತ್ತೀಚಿಗೆ ಬೆಟ್ಟಿಂಗ್ ಎನ್ನುವ ಭೂತಕ್ಕೆ ಜನಸಾಮಾನ್ಯರು ಹೆಚ್ಚು ಬಲಿಯಾಗುತ್ತಿದ್ದು, ಸಾಮಾನ್ಯವಾಗಿ ಕ್ರಿಕೆಟ್ ಐಪಿಎಲ್ ಹಾಗೂ ಹಾರ್ಸ್ ರೈಡಿಂಗ್ ಹೀಗೆ ನಾನಾ ರೀತಿಯಲ್ಲಿ ಬೆಟ್ಟಿಂಗ್ ಆಡುವ ಶೋಕಿ ಹೊಂದಿರುತಿದ್ದ ಜನಸಾಮಾನ್ಯರು ಇತ್ತೀಚಿಗೆ ಚುನಾವಣೆಗಳಲ್ಲೂ ಕೂಡ ತಮ್ಮ ಪಕ್ಷ ಹಾಗೂ ತಮ್ಮ ನಾಯಕರ ಗೆಲುವಿಗಾಗಿ ಲಕ್ಷಾಂತರ ರೂಪಾಯಿಗಳು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೊನ್ನೆ ತಾನೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಪರವಾಗಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟಿದ ವ್ಯಕ್ತಿ ಬೆಟ್ಟಿಂಗ್ ನಲ್ಲಿ ಸೋತಿರುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೇ ವ್ಯಕ್ತವಾಗಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಶಿವರಾಜ್ ಎಂಬ ವ್ಯಕ್ತಿ ರಾಮನಗರ ತಾಲೂಕಿನ ಬಿಡದಿ ಬಳಿ ಕೆಂಚನಗುಪ್ಪೆ ಎಂಬ ಗ್ರಾಮದವನಾಗಿದ್ದಾನೆ.
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭೆ ಪಲಿತಾಂಶ ಬೆಟ್ಟಿಂಗ್ ಕಟ್ಟಿ 50 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಹಿನ್ನೆಲೆ ಊರ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಮನಗರ ತಾಲೂಕಿನ ಬಿಡದಿ ಬಳಿ ಕೆಂಚನಗುಪ್ಪೆಯ ಶಿವರಾಜ್ ಮೃತ ವ್ಯಕ್ತಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ರವರು ಚುನಾವಣೆಯಲ್ಲಿ ಗೆಲ್ಲುತ್ತಾರೆಂದು 50 ಲಕ್ಷಕ್ಕೂ ಹೆಚ್ಚು ಬೆಟ್ಟಿಂಗ್ ಕಟ್ಟಿದ್ದ ಈತ ಲಕ್ಷಾಂತರ ಹಣ ಕೊಡಲಾಗದೆ ನಿನ್ನೆ ದಿನ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅದೇ ರೀತಿ ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ನಡುವೆ ಬಾರಿ ಪೈಪೋಟಿಯಿಂದ ಕೂಡಿತ್ತು ಅದೇ ರೀತಿ ಮಂಡ್ಯದಲ್ಲೂ ಕೂಡ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ತಮ್ಮ ಅಭಿಮಾನಿಗಳು ಬೆಟ್ಟಿಂಗ್ ಕೂಡ ಕಟ್ಟಿದ್ದರು. ಈ ಬಾರಿ ಸಹ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಬಾರಿ ಜಿದ್ದಾಜಿದ್ದಿನ ಕಣದಿಂದ ಕೂಡಿತ್ತು ಬಿಜೆಪಿಯ ಖ್ಯಾತ ಹೃದ್ರೋಗ ತಜ್ಞರಾದ ಡಾ!ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿ ಯಾಗಿ ಕಣದಲ್ಲಿದ್ದರು. ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರ ನಡುವೆ ಬಾರಿ ಹನಾ-ಹನಿ ನಡೆದಿತ್ತು. ಇದರ ನಡುವೆ ಎರಡು ಪಕ್ಷದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರು ಈ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಹಾಗು ಹೊಲಗದ್ದೆಗಳನ್ನು ಕಟ್ಟಿರುತ್ತಾರೆ ಅದೇ ರೀತಿ ಜೂನ್ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾಕ್ಟರ್ ಮಂಜುನಾಥ್ ಗೆಲುವಿನ ನಗೆ ಬೀರಿದ್ದರು. ಈ ಮೂಲಕ ಡಿಕೆ ಸಹೋದರರಿಗೆ ಭಾರಿ ಆಗತವಾಯಿತು ಅದರಲ್ಲೂ ಲಕ್ಷಾಂತರ ಮತಗಳಿಂದ ಡಿಕೆ ಸುರೇಶ್ ಅವರು ಸೋಲನ್ನು ಕಂಡರು.
ಚುನಾವಣೆಗಳು ಎಂದರೆ ಸೋಲು ಗೆಲುವು ಸರ್ವೇಸಾಮಾನ್ಯ ಹೀಗಾಗಿ ಯಾರದೋ ಚುನಾವಣೆಯಲ್ಲಿ ಇನ್ಯಾರೋ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಬೆಟ್ಟಿಂಗ್ ಕಟ್ಟಿದಂತ ಹಣವನ್ನು ಕೊಡುವುದಕ್ಕೆ ಆಗದೆ ಕೊನೆಗೆ ತಮ್ಮ ಪ್ರಾಣವನ್ನೇ ಅರ್ಪಿಸುವ ವ್ಯಕ್ತಿಗಳು. ಕೇವಲ ಮೋಜು ಮಸ್ತಿಗಾಗಿ ಇಂತಹ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ತಮ್ಮ ಕುಟುಂಬದ ಸದಸ್ಯರ ಜೀವನದ ಬಗ್ಗೆ ಕೂಡ ಸ್ವಲ್ಪ ಗಮನ ಹರಿಸಬೇಕು. ಅಭಿಮಾನ ಇರಬೇಕು ಹೊರತಾಗಿ ಹುಚ್ಚು ಅಭಿಮಾನದಿಂದಾಗಿ ಇಂತಹ ಅನಾಹುತಗಳು ಆಗುವುದು ಸರ್ವೇಸಾಮಾನ್ಯವಾಗಿದೆ.