ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾದು ಕುಳಿತಿತ್ತು ಇಂದು ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದ್ದು ದೇಶದಲ್ಲಿ ಸಮೀಕ್ಷೆಗಳ ಲೆಕ್ಕಾಚಾರ ಬುಡ ಮೇಲಾಗಿದೆ. ಜಿದ್ದಾಜಿದ್ದಿನ ಕಣಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಕೊನೆಗೂ ನಿರ್ಧಾರವಾಗಿದೆ. ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಬೆಳಗಾವಿ ಲೋಕಸಭಾ ಕ್ಷೇತ್ರವು ಕೂಡ ಒಂದು. ಇಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಜಗದೀಶ್ ಶೆಟ್ಟರ್ ಅವರು ಅಭ್ಯರ್ಥಿಯಾಗಿದ್ದರೆ ಕಾಂಗ್ರೆಸ್ ಪಕ್ಷದಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅಭ್ಯರ್ಥಿಯಾಗಿದ್ದರು. ಶತಾಯಗತಾಯ ಮಗನನ್ನು ಗೆಲ್ಲಿಸುವ ತಂತ್ರವನ್ನು ಹೆಣೆದಿದ್ದ ಹೆಬ್ಬಾಳಕರಿಗೆ ಜಗದೀಶ್ ಶೆಟ್ಟರ್ ಅವರು ಗೆಲ್ಲುವುದರ ಮೂಲಕ ಆಗಾತ ಉಂಟಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ಪ್ರಾಬಲ್ಯ.
ಬೆಳಗಾವಿ: ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಒಂದಾದ ಜಾರಕಿಹೊಳಿ ಕುಟುಂಬವು ಕೂಡ ಒಂದು ಜಾರಕಿಹೊಳಿ ಕುಟುಂಬದಲ್ಲಿ ನಾಲ್ಕು ಜನ ಸಹೋದರರು ಶಾಸಕರಾಗಿದ್ದು , ಸಧ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಮಂತ್ರಿಯಾಗಿದ್ದಾರೆ. ಅದು ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯಶಾಲಿ ಆಗುವುದರ ಮೂಲಕ ಜಾರಕಿಹೊಳಿ ಕುಟುಂಬದ ಪ್ರಾಬಲ್ಯವನ್ನು ಮತ್ತೊಮ್ಮೆ ರಾಜ್ಯಕ್ಕೆ ಸಾರಿದ್ದಾರೆ. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ವೈರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗನ ವಿರುದ್ಧ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸುವುದರ ಮೂಲಕ ಯಶಸ್ವಿಯಾಗಿದ್ದಾರೆ.
ಹೌದು ಈ ಬಾರಿ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಸಾಕಷ್ಟು ವೈ ಮನಸು ಹಾಗೂ ಒಳತಿಕ್ಕಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆಲುವು ಸಾಧಿಸುತ್ತಾರೆ ಎಂಬ ಊಹಾಪೋಹಗಳು ಎಲ್ಲೆಡೆ ಹರಡಿತ್ತು, ಆದರೆ ಸದ್ದಿಲ್ಲದೆ ಶೆಟ್ಟರ್ ಗೆಲುವಿಗಾಗಿ ಚಕ್ರವ್ಯೂಹ ಭೇದಿಸಿದ ಶಾಸಕ ರಮೇಶ್ ಜಾರಕಿಹೊಳಿ ಅವರ ರಾಜಕೀಯ ತಂತ್ರದಿಂದ ಸಚಿವೆ ಹೆಬ್ಬಾಳ್ಕರ್ ಅವರ ಮಗನನ್ನು ಸೋಲಿಸುವ ಮುಖೇನ ಲಕ್ಷ್ಮಿ ಹೆಬ್ಬಾಳ್ಕರಗೆ ಶಾಕ್ ಕೊಟ್ಟ ಶಾಸಕ ರಮೇಶ ಜಾರಕಿಹೊಳಿ. ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 24,000 ಮತಗಳಿಂದ ಅಂತರ ಕೊಟ್ಟಿದ್ದು ಅದೇ ರೀತಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ 21,000 ಮತಗಳ ಅಂತರ ಕೊಡುವುದರ ಮೂಲಕ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿಯೂ ತಾವೇ ನಿರ್ಣಾಯಕರು ಎಂದು ಮತ್ತೆ ಸಾಬೀತು ಮಾಡಿದ ಸಾಹುಕಾರರು.
ಬತ್ತಿದ ಹೆಬ್ಬಾಳ್ಕರ್ ಹೆಬ್ಬಯಕೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಅವರ ಸಹೋದರ ಚೆನ್ನರಾಜ ಹಟ್ಟಿಹೊಳಿಯವರನ್ನು ಭಾರೀ ಬಹುಮತದಿಂದ ಗೆಲ್ಲಿಸಿ ತರುವುದರ ಮೂಲಕ ಹೆಬ್ಬಾಳ್ಕರ್ ಅವರು ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದರು. ಅದೇ ರೀತಿ ಮಗನ ರಾಜಕೀಯ ಜೀವನಕ್ಕೂ ಕೂಡ ಒಳ್ಳೆಯ ಭವಿಷ್ಯ ರೂಪಿಸಬೇಕೆಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಹೌದು ನಿನ್ನೆ ಬಂದ ಲೋಕಸಭಾ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸುಪುತ್ರ ಬಾರಿ ಅಂತರದಿಂದ ಸೋಲುವುದರ ಮೂಲಕ ಹೆಬ್ಬಾಳ್ಕರ್ ಅವರು ಕಂಡ ಕನಸ್ಸು ನುಚ್ಚು ನೂರಾಯಿತು. ಮಗನ ಗೆಲುವಿಗಾಗಿ ಶತಾಯಗತಾಯ ಹಲವಾರು ರಣ ತಂತ್ರಗಳನ್ನು ಹೆಣೆದರು ಕೂಡ ಯಾವುದು ಸಹ ವರ್ಕೌಟ್ ಆಗಲಿಲ್ಲ. ಜಿಲ್ಲಾಧ್ಯಂತ ಘಟಾನುಘಟಿ ನಾಯಕರ ಸಂಪರ್ಕ ಮಾಡಿ ಮತಯಾಚಿಸಿದರು, ಹಲವಾರು ಸಭೆ ಸಮಾರಂಭಗಳನ್ನು ಮಾಡಿದ್ದರು ಕೂಡ ವಿಫಲವಾದ ಹೆಬ್ಬಾಳ್ಕರ್. ಮಗನ ರಾಜಕೀಯ ಭವಿಷ್ಯ ರೂಪಿಸುವಲ್ಲಿ ವಿಫಲರಾದರು. ಮತ್ತು ಜಿಲ್ಲೆಯಲ್ಲಿ ಮತ್ತೊಮ್ಮೆ ತಮ್ಮದೇ ಆದ ಹಿಡಿತವನ್ನು ಸಾಧಿಸುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನಿರಾಶದಾಯಕ ಫಲಿತಾಂಶ ಬಂದಿತು.
ಮಗನ ಗೆಲುವಿಗಾಗಿ ಹಲವಾರು ರೀತಿ ತಂತ್ರಗಳನ್ನು ಹೆಣೆದರೂ ಕೂಡ ಸಚಿವೆ ಹೆಬ್ಬಾಳ್ಕರ್ ಅವರ ಸ್ವ ಕ್ಷೇತ್ರದಲ್ಲೇ ಮಗನಿಗೆ ಹೆಚ್ಚಿನ ಮತಗಳನ್ನು ನೀಡುವಲ್ಲಿ ವಿಫಲರಾದರು. ಬಿಜೆಪಿ ಅಭ್ಯರ್ಥಿ 47 ಸಾವಿರ ಮತಗಳಿಂದ ಮುನ್ನಡೆ ಸಾಧಿಸುವ ಮೂಲಕ ವಿಜಯಶಾಲಿ ಯಾಗಲು ಸುಲಭವಾದ ದಾರಿಯಾಯಿತು. ತಾಯಿಯ ಸ್ವಕ್ಷೇತ್ರದಲ್ಲಿ ಹಿಡಿತವನ್ನು ಕೈ ಚೆಲ್ಲಿದ ಮೃಣಾಲ್ ಹೆಬ್ಬಾಳ್ಕರ್ ಭಾರಿ ಅಂತರದಿಂದ ಸೋಲನ್ನು ಕಂಡರು.