ಗೋಕಾಕ ಮಾಜಿ ಶಾಸಕರಾದ  ಚಂದ್ರಶೇಖರ ಗುಡ್ಡಾಕಾಯು ನಿಧನ.

ಮಾಜಿ ಶಾಸಕರಾದ ಚಂದ್ರಶೇಖರ ಗುಡ್ಡಾಕಾಯು

ಬೆಳಗಾವಿ: ಗೋಕಾಕನ ಮಾಜಿ ಶಾಸಕರಾದ ಶ್ರೀ ಚಂದ್ರಶೇಖರ ಗುಡ್ಡಾಕಾಯು (91) ಅವರು ನಿನ್ನೆ ದಿನ ಸಂಜೆ 8.30 ಕ್ಕೆ ಬೆಳಗಾವಿಯಲ್ಲಿರುವ ಅವರ ಮನೆಯಲ್ಲಿ ನಿಧನರಾದರು. ಇನ್ನೂ ಮೃತ ಮಾಜಿ ಶಾಸಕರು ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದವರಾಗಿದ್ದು, ಇವರು 1972 ರಲ್ಲಿ ಗೋಕಾಕ ವಿಧಾನ್ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.

ಚಂದ್ರಶೇಖರ ಗುಡ್ಡಾಕಾಯು ಅವರ ಸಣ್ಣ ಪರಿಚಯ.

ಚಂದ್ರಶೇಖರ್ ಗುಡ್ಡಾಕಾಯು ಅವರು ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದವರಾಗಿದ್ದು, ಗೋಕಾಕ್ ನ ಶಾಸಕರಾಗುವ ಮುಂಚೆ ಇವರು ಮಹಾರಾಷ್ಟ್ರ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ದಿ. ಶಂಕರರಾವ್ ಚೌವ್ಹಾಣ್ ರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು ಅಲ್ಲಿದ್ದ ಇವರನ್ನು  ರಾಯಭಾಗದ  ಶ್ರೀ ದಿವಂಗತ ವಸಂತ್ ರಾವ್ ಪಾಟೀಲ್ ಅವರು ಕರೆದುಕೊಂಡು ಬಂದು ಗೋಕಾಕ್ ನಿಂದ ಚುನಾವಣೆಗೆ ನಿಲ್ಲಿಸಿದರು.

1972 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಶೇಖರ್ ಗುಡ್ಡಾಕಾಯು ಅವರು 28,005 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಂಸ್ಥಾ ಕಾಂಗ್ರೆಸನ್ ಬಿ ಎಮ್ ಪಾಟೀಲ್ ಅವರು 11,144 ಮತ ಪಡೆದಿದ್ದರು.

ಅದೇ ರೀತಿ 1978 ರ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿಯಿಂದ ವಸಂತರಾವ್ ಪಾಟೀಲ್ ಗೋಕಾಕ್ ನಿಂದ ಚಂದ್ರಶೇಖರ್ ಗುಡ್ಡಾಕಾಯು ಇಬ್ಬರು ಕೂಡ ಪರಾಜಿತಗೊಂಡರು. ಕಾಂಗ್ರೆಸ್ ವಿಭಾಗವಾಗಿ ರೆಡ್ಡಿ ಕಾಂಗ್ರೆಸ್ಸಿನಿಂದ ಇವರಿಬ್ಬರು ಪರಾಭವಗೊಂಡಿದ್ದರು.

ಮಾಜಿ ಶಾಸಕರಾದ ಮೇಲೆ ಚಂದ್ರಶೇಖರ್ ಗುಡ್ಡಾಕಾಯು ಅವರು ಬೆಳಗಾವಿಯ ಮಹಾಂತೇಶ್ ನಗರದಲ್ಲಿ ವಾಸಿಸುತ್ತಿದ್ದರು. 91 ರ ಇಳಿವಯಸ್ಸಿನ ಚಂದ್ರಶೇಖರ್ ಗುಡ್ಡಾಕಾಯು ಅವರು ನಿನ್ನೆ ದಿನ ಅಸೂನಿಗಿದರು.