ಚುನಾವಣಾ ಆಯೋಗದಿಂದ ಚುನಾವಣೆಗಳಲ್ಲಿ ಯಾವುದೇ ರೀತಿ ಅಕ್ರಮವಾಗಿ ಹಣ ಹಂಚುವುದು ಹಾಗೂ ಮತದಾರರಿಗೆ ಆಮಿಷವನ್ನು ಒಡ್ಡುವುದರ ಬಗ್ಗೆ ಜಾಗೃತಿ ಮೂಡಿಸಿದರು ಅಕ್ರಮ ಹಣ ಹಂಚಿಕೆ ಮಾತ್ರ ಇನ್ನು ಕೂಡ ರಾಜಾರೋಷವಾಗಿ ನಡೆಯುತ್ತಲೇ ಇದೆ. ಹೌದೂ ಲೋಕಸಭೆ ಚುನಾವಣೆಯ 2 ನೇ ಹಂತದ ಮತದಾನ ದಿನಗಣನೆ ಹತ್ತಿರವಾಗುತ್ತಿದ್ದಂತೆಯೇ ರಾಜಕಿಯ ಪಕ್ಷಗಳು ಹಲವು ರೀತಿಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಆರಂಭಿಸಿದ್ದು.ಅದೇ ರೀತಿ ಬೆಳಗಾವಿ ಲೋಕಸಭಾ ಚುನಾವಣೆಯ ಕಾವೂ ಬಾರೀ ಪೈಪೋಟಿ ಇಂದ ಕೂಡಿದ್ದು. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರವಾಗಿ ಗೋಕಾಕ ವಿಧಾನ ಸಭಾ ಕ್ಷೇತ್ರದ ಅಂಕಲಗಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜೊತೆಗೆ ಒಂದು ಸಾವಿರ ರುಪಾಯಿ ಹಣವನ್ನು ಹಂಚುತ್ತಿದ್ದವರನ್ನು ಸ್ಥಳೀಯರು ತಡೆದು ಕೂಡಲೇ ಅಂಕಲಗಿ ಪೋಲೀಸ ಠಾಣೆಗೆ ಒಪ್ಪಿಸಿದ್ದಾರೆ.
ಬೆಳಗಾವಿ ಏ.5: ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರವಾಗಿ ಗೋಕಾಕ ವಿಧಾನ ಸಭಾ ಕ್ಷೇತ್ರದ ಅಂಕಲಗಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜೊತೆಗೆ ಹಣ ಹಂಚಲು ಬಂದಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಭದ್ರಾವತಿ ಕಾಂಗ್ರೆಸ್ ಶಾಸಕ ಕೆ ಸಂಗಮೇಶ್ ಬೆಂಬಲಿಗರನ್ನು ತಡೆದ ಅಂಕಲಗಿ ಗ್ರಾಮಸ್ಥರು ಅವರಿಂದ ಸುಮಾರು 25 ಲಕ್ಷ ರೂಪಾಯಿ ನಗದು ಹಣವನ್ನು ಹಾಗೂ ಹಣ ಹಂಚಲು ಬಂದ ಭದ್ರಾವತಿಯ ಕೀರ್ತಿ ಹಾಗೂ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ರಾಜು ಉಪ್ಪಾರ ಸೇರಿ ಇದಕ್ಕೆಲ್ಲ ಉಸ್ತುವಾರಿಯಾಗಿ ಬಂದ ಗೋಕಾಕ ಕಾಂಗ್ರೆಸ್ ಮುಖಂಡ ಡಾ! ಮಹಾಂತೇಶ ಕಡಾಡಿ ಸೇರಿ ಒಟ್ಟು 6 ಜನರನ್ನು ಸ್ಥಳೀಯರು ಅಂಕಲಗಿ ಪೋಲೀಸ್ ಠಾಣೆಗೆ ಒಪ್ಪಿಸಿದ್ದರು.
ಡಾ. ಮಹಾಂತೇಶ ಕಡಾಡಿಯವರು ನೀಡಿದ 25 ಲಕ್ಷ ರೂಪಾಯಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಭದ್ರಾವತಿ ಶಾಸಕ ಕೆ ಸಂಗಮೇಶ್ ಅವರ ಬೆಂಬಲಿಗರು ಮತದಾರರಿಗೆ ಮನೆ ಮನೆಗೆ ತೆರಳಿ ಹಣ ಹಂಚ್ಚುವ ಸಮಯದಲ್ಲಿ ಸ್ಥಳೀಯರು ಅವರನ್ನು ತಡೆದು ಕೂಡಲೇ ಹಂಚಲು ತಂದಿದ್ದ 25 ಲಕ್ಷ ರೂಪಾಯಿ ಹಣ ಹಾಗೂ ಮುಖಂಡ ಮಹಾಂತೇಶ ಕಡಾಡಿ ಸೇರಿ ಒಟ್ಟು ಆರು ಜನರನ್ನು ಅಂಕಲಗಿ ಪೋಲಿಸ್ ಠಾಣೆಗೆ ಒಪ್ಪಿಸಿದರು.