ಟಗರಿನ ಕಾಳಗದಲ್ಲಿ ತನ್ನದೆಯಾದ ಹೆಸರು ಮಾಡಿದ್ದ ಶಬರಿ ಎಂಬ ಟಗರು ಇನ್ನೂ ನೆನಪು ಮಾತ್ರ.

ಶಬರಿ ಟಗರು

ಅಭಿಮಾನ ಅಂದ್ರೆ ಒಂತರ ಹುಚ್ಚು ಅದರಲ್ಲೂ ಕೂಡ ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುವ ಟಗರಿನ ಕಾಳಗ, ಕುದುರೆ ಶರತ್ತು, ತೆರಬಂಡಿ ಶರತ್ತು ಈ ತರಾ ನಡೆಯುವ ಸ್ಪರ್ಧೆಗಳಲ್ಲಿ ಅದರದೇ ಆದ ಛಾಪು ಮೂಡಿಸಿ ಹೆಸರು ಮಾಡಿದಂತಹ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ತೋರುವ ಮೂಲಕ ಅವುಗಳ ಅಪ್ಪಟ ಅಭಿಮಾನಿಗಳಾಗಿರುತ್ತಾರೆ. ಹಾಗೇ ಸ್ಪರ್ಧೆ ನಡೆಯುವ ಸಮಯದಲ್ಲಿ ಅವುಗಳ ಮೇಲೆ ಬೆಟ್ಟಿಂಗ್ ಸಹ ಕಟ್ಟುತ್ತಾರೆ. ಆದ್ದರಿಂದ ಇದೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಒಳಗೊಂಡ ಶಬರಿ ಎಂಬ ಟಗರನ್ನು ಕಳೆದುಕೊಂಡು  ಲಕ್ಷಾಂತರ ಅಭಿಮಾನಿಗಳು ಮರಗುತ್ತಿದ್ದಾರೆ.

ರಾಜ್ಯಾದ್ಯಂತ ಹೆಸರು ಮಾಡಿದ್ದ ಶಬರಿ ಟಗರು ಇನ್ನು ನೆನಪು ಮಾತ್ರ

ಹಾವೇರಿ: ಹೌದು ರಾಜ್ಯದಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದ ಶಬರಿ ಎಂಬ ಟಗರು ಮೂಲತಃ ಹಾವೇರಿ ಜಿಲ್ಲೆಯ ಕಳ್ಳಿಹಾಳ  ಗ್ರಾಮದಾಗಿದ್ದು. ಇದರ ಮಾಲೀಕ ಕೊಲ್ಹಾಪೂರ ಮಹಾಲಕ್ಷ್ಮಿ ದೇವಿಗೆ ಹರಕೆ ಕೊಡಲು ತಂದಿದ್ದ ಟಗರನ್ನು ಶಬರಿ ಎಂಬ ನಾಮಕರಣ ಮಾಡಿ ಟಗರಿನ ಕಾಳಗಕ್ಕೆ ಭಾಗವಹಿಸಲು ಆರಂಭಿಸಿದ. ಅದೇ ಶಬರಿ ಎಂಬ ಟಗರು  ಸತತ 9 ವರ್ಷಗಳ ಕಾಲ ಟಗರಿನ ಕಾಳಗದಲ್ಲಿ ಭಾಗವಹಿಸಿ ಲಕ್ಷಾಂತರ ರೂಪಾಯಿಗಳ ಜೊತೆಗೆ ಬಹುಮಾನಗಳನ್ನು, ಬೈಕಗಳನ್ನು, ಪದಕಗಳನ್ನು ತಂದುಕೊಟ್ಟ ಶಬರಿ, ಕಣದಲ್ಲಿ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿತ್ತು. ಹೀಗೆ ಅಪಾರ್ ಅಭಿಮಾನಿಗಳನ್ನೊಳಗೊಂಡ ಶಬರಿಯನ್ನು ನಿನ್ನೆ  ಏ. 03 ರಂದು ಅದರ ಮಾಲೀಕ  ಟಗರನ್ನು ದೇವರಿಗೆ ಬಲಿ ಕೊಟ್ಟಿದ್ದಾನೆ.

ಸಾಮಾಜಿಕ ಜಾಲ ತಾಣಗಳಲ್ಲಿ ಶಬರಿ ವಿಡಿಯೋ ಬಾರಿ ವೈರಲ್ ಆಗುತ್ತಿದ್ದು ಮಾಲೀಕನ ವಿರುಧ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.