ದೇಶಾದ್ಯಂತ ಸಂಚಲನ ಮೂಡಿಸಿದ ಸಂಸದ ಪ್ರಜ್ವಲ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋ ಪೆನಡ್ರೈವ್ ಬಾರಿ ಸದ್ದು ಮಾಡಿದ್ದು ರಾಜ್ಯದಲ್ಲಿ ರಾಜಕೀಯ ಪಕ್ಷಗಳ ವಾಕ್ಸಮರ ಹೆಚ್ಚುತ್ತಿದ್ದು ಇದೀಗ ಇದರ್ ಬೆನ್ನಲ್ಲೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗನಿಗೂ ಅಶ್ಲೀಲ ಸಿಡಿ ಬಿಡುಗಡೆ ಭೀತಿ ಶುರುವಾಗಿದ್ದು. ಕೋರ್ಟ್ ನಿಂದ ಸ್ಟೇ ತಂದ ಕಾಂತೇಶ.
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವೀಡಿಯೋಗಳು ವೈರಲ ಆಗಿದ್ದು ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗನಾದ ಕಾಂತೇಶಗೂ ತಟ್ಟಿದ ಅಶ್ಲೀಲ ಸಿಡಿ ಭೀತಿಯಿಂದ ಮಾಧ್ಯಮಗಳಿಗೆ ಪ್ರಸಾರ ನಿರ್ಭಂದ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಮಾನಹಾನಿ ಚಿತ್ರ ಪ್ರದರ್ಶನ ಮಾಡದಂತೆ ನಿರ್ಬಂಧಕಾಜ್ಞೆ ನೀಡಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ಆದೇಶ ಹೋರಡಿಸಿದೆ.